ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗೆ ಮಾರಕವಾಗಿರುವ ಅಂಗಮಾರಿ (ಲೇಟ್ ಬೈಟ್) ರೋಗದ ಪರಿಣಾಮಕಾರಿ ನಿರ್ವಹಣೆ
ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗೆ ಮಾರಕವಾಗಿರುವ ಅಂಗಮಾರಿ (ಲೇಟ್ ಬೈಟ್) ರೋಗದ ಪರಿಣಾಮಕಾರಿ ನಿರ್ವಹಣೆ
ಆಲೂಗಡ್ಡೆ ಮತ್ತು ಟೊಮ್ಯಾಟೊ ಬೆಳೆಗೆ ಮಾರಕ ರೋಗವಾಗಿ ಪರಿಣಮಿಸಿರುವ ಅಂಗಮಾರಿ ರೋಗವು ಫೈಟೋಪ್ತೆರಾ ಇನ್ಫೆಸ್ಟಾನ್ಸ್ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ ಹಾಗೂ ಈ ರೋಗವನ್ನು ಹತೋಟಿಯಲ್ಲಿಡದಿದ್ದರೆ ಇದರಿಂದ ಸುಮಾರು 80 ರಷ್ಟು ಬೆಳೆ ನಷ್ಟವಾಗುತ್ತದೆ.
ಆದ್ದರಿಂದ ಈ ರೋಗವನ್ನು ನಿಯಂತ್ರಿಸಲು ಮತ್ತು ನಿರ್ವಹಣೆ ಮಾಡಲು ರೈತರು ಹೆಚ್ಚಿನ ಕಾಳಜಿಯನ್ನ ವಹಿಸಬೇಕಾಗುತ್ತದೆ.
ಈ ಮಾರಕ ರೋಗವು ವರ್ಷದ ತಂಪಾದ ಹಾಗೂ ಹೆಚ್ಚು ತೇವಾಂಶವುಳ್ಳ ಸಮಯದಲ್ಲಿ ಅಂದರೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ರೋಗಮುಕ್ತ ಆರೋಗ್ಯಕರ ಬೀಜದ ಆಯ್ಕೆ, ಒಂದು ಗಿಡದಿಂದ ಇನ್ನೊಂದು ಗಿಡದ ನಡುವೆ ಹೆಚ್ಚು ಅಂತರ ಕಾಯ್ದುಕೊಳ್ಳುವುದು, ಸಮತೋಲಿತ ಬೆಳೆ ಪೋಷಣೆ, ಮತ್ತು ಮೊದಲಿನಿಂದಲೆ ಸರಿಯಾದ ರೋಗ ನಿಯಂತ್ರಣ ಮಾರ್ಗಗಳನ್ನು ಅನುಸರಿಸುವುದರಿಂದ ರೋಗಮುಕ್ತ ಬೆಳೆಯನ್ನು ಬೆಳೆಯಲು ಸಹಾಯ ಮಡುತ್ತದೆ.
ಈ ರೋಗವು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಗಾಳಿಯಿಂದ ಹರಡುತ್ತದೆ ಹಾಗೂ ಈ ರೋಗದ ಬೆಳವಣಿಗೆಗೆ ಪೂರಕವಾದ ವಾತಾವಣರಣ ಇದ್ದಲ್ಲಿ ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಬೆಳೆಯನ್ನು ಆಕ್ರಮಣ ಮಾಡುತ್ತದೆ.
ಈ ರೋಗವನ್ನು ಹಲವಾರು ಬಗೆಯ ಹಾಗೂ ವಿವಿಧ ವರ್ಗದ ಶಿಲೀಂಧ್ರನಾಶಕಗಳನ್ನು ಸಿಂಪರಣೆ ಮಾಡುವುದರ ಮೂಲಕ ನಿರ್ವಹಣೆ ಮಾಡಬಹುದು.
ರೋಗದ ತೀವ್ರತೆಗೆ ಅನುಗುಣವಾಗಿ ಈ ಕೆಳಕಂಡ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಈ ರೋಗವನ್ನು ಹತೋಟಿಯಲ್ಲಿಡಬಹುದು.
1. ರೋಗದ ಆರಂಭಿಕ ಹಂತದಲ್ಲಿ ಸಿಂಪರಣೆ ಮಾಡಬಹುದಾದ ಅಂತವ್ರ್ಯಾಪಿ ಶಿಲೀಂಧ್ರನಾಶಕಗಳು
Metalaxyl 35 % [Krilaxyl, Krilaxyl power, Ridomet] - 0.5 gm ರಿಂದ 1 gm ಪ್ರತೀ ಲೀ. ನೀರಿನಲ್ಲಿ
2. ರೋಗದ ಆರಂಭಿಕ ಹಂತದಲ್ಲಿ ಸಿಂಪರಣೆ ಮಾಡಬಹುದಾದ ಸಾಂಪರ್ಕಿಕ ಶಿಲೀಂಧ್ರನಾಶಕಗಳು
Mancozeb [Indofil M-45, Dithane M-45 etc.,] ಅಥವಾ Chlorothalonil [ Ishaan, Kavach, Jatayu] ಅಥವಾ Copper oxy chloride [ Blitox, Blue copper , Borogold] ಅಥವಾ Copper Hydroxide [Kocide 2 – 2.5 gm /L] ಇವುಗಳಲ್ಲಿ ಯಾವುದಾದರೂ ಒಂದನ್ನು Neel Cu 0.5 gm/L ಜೊತೆಯಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ರೋಗವನ್ನು ತಕ್ಷಣದಲ್ಲೆ ಹತೋಟಿಗೆ ತರಬಹುದು.
3. ರೋಗದಬೆಳವಣಿಗೆ ಹಂತದಲ್ಲಿ ಜೊತೆಯಾಗಿ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದಾದ ಅಂತವ್ರ್ಯಾಪಿ + ಸಾಂಪರ್ಕಿಕ ಶಿಲೀಂಧ್ರನಾಶಕಗಳು
a. Dimethomorph (Acrobat) + Mancozeb [Indofil M-45, Dithane M-45, etc.,] ಅಥವಾChlorothalonil [ Ishaan, Kavach, Jatayu] ಅಥವಾ Propineb [Antracol, Sanipeb]
b. Difenoconazole [Score]0.5 mL/L+ Chlorothalonil [Ishaan, Kavach, Jatayu] 2 gm/L
4. ರೋಗದತೀವ್ರತೆ ಹೆಚ್ಚಿದ್ದಾಗ, ಅಂತವ್ರ್ಯಾಪಿ ಹಾಗೂ ಸಾಂಪರ್ಕಿಕ ಎರಡೂ ಗುಣವನ್ನು ಹೊಂದಿರುವ ಈ ಕೆಳಗಿನ ಶಿಲೀಂಧ್ರನಾಶಕಗಳನ್ನು ಸಿಂಪರಣೆ ಮಾಡುವುದರಿಂದ ರೋಗವನ್ನು ಹತೋಟಿಯಲ್ಲಿಡಬಹುದು
Metalaxyl 8% + Mancozeb [Ridomil gold, Ju Ridomil, Master, Krilaxy 72]
- Fluopicolide 4.44% + Fosetyl-Al [Profiler]
- Iprovalicarb + Propineb [Melody duo]
- Fenamidone + Mancozeb [Sectin]
- Fluopicolide + Propamocarb Hydrochloride [Infinito]
- Kresoxim – Methyl 15 % + Chlorothalonil [Sarthak]
- Chlorothalonil + Metalaxyl-M [Folio gold] ಇನ್ನೂ ಹಲವು
5. ಜೈವಿಕ ಶಿಲೀಂಧ್ರನಾಶಕಗಳ ಬಳಕೆಯಿಂದ ಸಹ ಈ ರೋಗವನ್ನು ನಿಯಂತ್ರಿಸಬಹುದು. ಜೈವಿಕ ಶಿಲೀಂಧ್ರನಾಶಕಗಳು ರೋಗಕಾರಕ ಬೀಜಕಗಳನ್ನು ತಿನ್ನುವುದರ ಮೂಲಕ ರೋಗವನ್ನು ನಿಯಂತ್ರಿಸುತ್ತವೆ. ಅವುಗಳೆಂದರೆ.
ಅತ್ಯಂತ ಹೆಚ್ಚು ಪರಿಣಾಮಕಾರಿ ಶಿಲೀಂಧ್ರನಾಶಗಳ ಆಯ್ಕೆ ಹಾಗೂ ಬಳಕೆಯಿಂದ ಮಾತ್ರ ರೋಗದ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ.
**********
Dr. Asha, K.M.,
Subject Matter Expert, BigHaat
For more information kindly call on 8050797979 or give missed call on 180030002434 during office hours 10 AM to 5 PM
------------------------------------------------------------------------------------------------
Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.
+++++++++++++++++++++
Leave a comment