ಮಾವಿನಲ್ಲಿ ಜಿಗಿ ಹುಳುವಿನ ಸಮಗ್ರ ಕೀಟ ನಿರ್ವಹಣಾ ಕ್ರಮಗಳು

ಮಾವಿನ ಜಿಗಿ ಹುಳು (ಇಡಿಯೊಸ್ಕೋಪಸ್ ನಿಟಿಡುಲಸ್ ಹಾಗೂ ಇಡಿಯೊಸ್ಕೋಪಸ್ ಕ್ಲೈಪಿಯಾಲಿಸ್) ಭಾರತದ ಎಲ್ಲಾ ಪ್ರಮುಖ ಮಾವು ಬೆಳೆಯುವ ಪ್ರದೇಶಗಳಲ್ಲಿ ಬಹಳ ಗಂಭೀರ ಸಮಸ್ಯೆಯನ್ನ ಉಂಟುಮಾಡುತ್ತಿದ್ದು, ಈ ಕೀಟದ ಹಾವಳಿಯಿಂದ ಗಿಡಗಳು ದುರ್ಬಲವಾಗಿ ನೇರವಾಗಿ ಶೇಖಡಾವಾರು ಕಾಯಿ ಕಟ್ಟುವಿಕೆ ಮೇಲೆ ಪರಿಣಾಮವನ್ನ ಬೀರುತ್ತದೆ. ನಂತರ ಎಳೆಯ ಕಾಯಿಗಳು ಉದುರಲು ಪ್ರಾರಂಭವಾಗಿ, ಇದರ ಕಾರಣ ಇಳುವರಿಯಲ್ಲಿ ಶೇ. 60 ಕ್ಕಿಂತ ಹೆಚ್ಚು ನಷ್ಟವನ್ನ ರೈತರು ಕಾಣಬಹುದು. ಆದ್ದರಿಂದ ರೈತರು ಆರ್ಥಿಕ ಬೆಳೆ ನಷ್ಟವನ್ನು ತಪ್ಪಿಸಲು ಸರಿಯಾದ ಎಚ್ಚರಿಕೆ ಕ್ರಮಗಳನ್ನ ಅನುಸರಿಸಬೇಕು.

 

ಹಾನಿಯ ಲಕ್ಷಣಗಳು

ಮಾವು ಜಿಗಿ ಹುಳುಗಳು ಸಾಮಾನ್ಯವಾಗಿ ಚಿಗುರೆಲೆ ಹಾಗೂ ಹೂ ಗೋಂಚಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದು, ಪ್ರೌಢ ಹಾಗೂ ಅಪ್ಸರೆಗಳು ಹೂ ಗೊಂಚಲಿನಿಂದ ರಸ ಹೀರುತ್ತವೆ, ಆದಕಾರಣ ಹೂವುಗಳು ಕಂದು ಬಣ್ಣಕ್ಕೆ ತಿರುಗಿ, ಒಣಗಿ ಉದುರಿಹೋಗುತ್ತವೆ ಇದರಿಂದ ಕಾಯಿ ಕಟ್ಟುವಿಕೆಯ ಪ್ರಮಾಣದಲ್ಲಿ ಇಳಿಮುಖ ಕಾಣಬಹುದು.

 

ರಸ ಹೀರುವ ಸಂದರ್ಭದಲ್ಲಿ, ಅವುಗಳು ಅಂಟು ಪದಾರ್ಥವನ್ನು ಹೊರಹಾಕುತ್ತವೆ ಇದರಿಮದ ಕಪ್ಪು ಮಸಿ ಬಣ್ಣದ ಶಿಲೀಂಧ್ರಗಳ ಬೆಳವಣಿಗೆಯಾಗುತ್ತದೆ. ಇದರಿಂದ ಎಲೆಗಳು ಕಪ್ಪಾಗಿ ದ್ಯುತಿಸಂಶ್ಲೇಷಣೆಯನ್ನು ಕಡಿಮೆ ಆಗುತ್ತದೆ, ಆದಕಾರಣ ಗಿಡದ ಬೆಳವಣಿಗೆ ಕುಂಠಿತವಾಗಿ ಹೊಸ ಚಿಗುರುಗಳನ್ನು ಬಂಧಿಸುತ್ತದೆ.

 

ಕಾರಣಗಳು

  1. ವಯಸ್ಕ ಜಿಗಿ ಹುಳು ಕೀಟಗಳು ಮರದ ತೊಗಟೆಗಳಲ್ಲಿ ಅವಿತು ವರ್ಷವಿಡೀ ಬದುಕುಳಿಯಬಲ್ಲವು, ಆದರೆ ಮಾವು ಹೂಬಿಡುವ ಹಾಗೂ ಕಾಯಿ ಕಟ್ಟುವ ಸಮಯದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ.

  1. ವಯಸ್ಕ ಜಿಗಿ ಹುಳುಗಳು ಹೂಗೊಂಚಲು ಹಾಗೂ ಚಿತುರೆಲೆಗಳ ಮೇಲೆ ಮೊಟ್ಟಯನ್ನು ಇಡುತ್ತವೆ ಹಾಗೂ ಕೇವಲ ಹೂಬಿಡುವ ಕಾಲದಲ್ಲಿ ಅವುಗಳು 2-3 ತಲೆಮಾರುಗಳನ್ನು ಹೊಂದುತ್ತವೆ ಇದರಿಂದ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. 
  1. ಹೆಚ್ಚು ಆದ್ರತೆ ಹಾಗೂ ಹೆಚ್ಚು ನೆರಳು ಇರುವ ಸಂದರ್ಭದಲ್ಲಿ ಮಾವು ಜಿಗಿ ಹುಳುಗಳು ಸಂಖ್ಯೆಯು ಹೆಚ್ಚುತ್ತದೆ

  1. ಹೆಚ್ಚು ಒತ್ತೋತ್ತಾಗಿ ನಾಟಿ ಮಾಡಿರುವ ತೋಟಗಳಲ್ಲಿ ಜಿಗಿ ಹುಳುಗಳು ಹೆಚ್ಚಾಗಿರುತ್ತವೆ

 

  1. ಅತೀ ಹೆಚ್ಚು ತೇವಾಂಶವಿರುವ ತೋಟಗಳಲ್ಲಿಯೂ ಕೂಡ ಜಿಗಿ ಹುಳುಗಳ ಸಂಖ್ಯೆ ಹೆಚ್ಚಾಗಿರುತ್ತದೆ

 

ಮುಂಜಾಗ್ರತಾ ಕ್ರಮಗಳು

 

  1. ತೋಟಗಳು ಒತ್ತೋತ್ತಾಗಿರದೆ ಹೆಚ್ಚಿನ ಗಾಳಿ- ಬೆಳಕು ಸಿಗುವಂತೆಮಾಡಿ ತೋಟವನ್ನು ಸ್ವಚ್ಛವಾಗಿಟ್ಟುಕೊಳ್ಳಿ

 

  1. ತೋಟಕ್ಕೆ ಪೆದೇಪದೇ ಸಾರಜನಕಯುಕ್ತ ಗೊಬ್ಬರ ನೀಡುವುದನ್ನು ಮಾಡಬೇಡಿ

  1. ತೋಟದಲ್ಲಿ ಅತಿಯಾದ ನೀರಾವರಿ ಅಥವಾ ಹೆಚ್ಚಿನ ತೇವಾಂಶವಿರುವುದನ್ನು ತಪ್ಪಿಸಿ

 

  1. ತೋಟದಲ್ಲಿ ವಯಸ್ಕ ಹಾಗೂ ಅಪ್ಸರೆ ಕೀಟಗಳು ಇರುವುದನ್ನು ಆಗಾಗ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಿ

 

  1. ಜಿಗಿ ಹುಳುವಿನ ಬಾಧೆಗೊಳಗಾದ ಗಿಡದ ಟೊಂಗೆಗಳನ್ನು (ಭಾಗಗಳನ್ನು) ಕಿತ್ತು ನಾಶಪಡಿಸಿ

 

  1. ತೋಟದಲ್ಲಿ ಕಳೆಗಳನ್ನು ನಿರ್ವಹಣೆ ಮಾಡಿ ಸ್ವಚ್ಛವಾಗಿಟ್ಟುಕೊಳ್ಳಿ

  1. ಹೂವು ಬಿಡುವುದಕ್ಕೆ ಮುಂಚೆ ಮುಂಜಾಗ್ರತಾ ಕ್ರಮವಾಗಿ ಇಮಿಡಾಕ್ಲೋಪ್ರಡ್ ಅಥವಾ ಥೈಯಾಮಿತೋಗ್ಸಾಮ್ ಅಥವಾ ಮೆಟರೈಜಿಯಂ (Bio Metaz Metarhizium Anisopliae @ 10 mL/L Or Sun Bio Meta Bio pesticide @ 5mL/L) ಅಥವಾ ಅಸಿಫೆಟ್ (Asataf @ 2gm/L Or Starthene @ 2gm/L Or Lancer gold @ 1.5-2 gm/L) ಇರುವ ಕೀಟನಾಶಕಳನ್ನ + ಬೆವಿಸ್ಟಿನ್ @ 2.5-3 gm/L ಅಥವಾ ವೆಟ್ಟೆಬಲ್ ಸಲ್ಫರ್ ಜೊತೆ ಬೆರೆಸಿ ಸಿಂಪರಣೆ ಮಾಡುವುದರಿಂದ ಮಾವಿನ ಜಿಗಿ ಹುಳುಗಳಿವಿನ ಹಾವಳಿಯನ್ನು ಕಡಿಮೆ ಮಾಡಬಹುದು ಇದರ ಜೊತೆಯಲ್ಲಿ ಬೂದುರೋಗವನ್ನು ಸಹ ತಡೆಗಟ್ಟಬಹುದು. ಹೂಬಿಡುವುದಕ್ಕೂ ಮುಂಚಿತವಾಗಿ ಕೀಟನಾಶಗಳ ಸಿಂಪರಣೆ ಮಾಡುವುದರಿಂದ ಪರಾಗಸ್ಪರ್ಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕಾಯಿ ಕಟ್ಟಿದ ನಂತರ ಮತ್ತೊಮ್ಮೆ ಮೇಲೆ ತಿಳಿಸಿದ ಸಿಂಪರಣೆಯನ್ನ ಮಾಡಿ.

 

ನಿರ್ವಹಣಾ ಕ್ರಮಗಳು

ಕೆಳಗೆ ತಿಳಿಸಿರುವ ಕೀಟನಾಶಕಗಳ ಸಂಯೋಜನೆಯನ್ನು 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡುವುದರಿಂದ ಮಾವು ಜಿಗಿ ಹುಳುವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು

 

I- ಮೊದಲ ಸಿಂಪರಣೆ- ಇಮಿಡಾಕ್ಲೋಪ್ರಡ್ (ಟಟಾಮಿಡ @ 0.5 mL/L ಅಥವಾ ಸೊಲೊಮನ್ @ 0.75-1 mL/L) + ಮೆಪ್ಟೈಲ್ಡಿನೋಕ್ಯಾಪ್ (ಕೆರಾಥೇನ್ ಗೋಲ್ಡ್ @ 0.7 mL/L) + ಮ್ಯಾಂಗೋ ಸ್ಪೆಷಲ್ ಪ್ಲ್ಯಾಂಟ್ ಬೂಸ್ಟರ್ @ 2-3 mL/L

 

II- ಎರಡನೆ ಸಿಂಪರಣೆ- ಥೈಯಾಮಿತೋಗ್ಸಾಮ್ (ಆಕ್ಟರಾ @ 0.5 gm/L ಅಥವಾ ಅಲಿಕಾ @ 0.5 mL/L ಅಥವಾ ಅರೇವಾ @ 0.5 gm/L) + ಹೆಗ್ಸಾಕೊನಾಜೋಲ್ (ಕಾಂಟಾಫ್ ಪ್ಲಸ್ @ 2mL/L ಅಥವಾ ಕಾಂಟಾಫ್ @ 2mL/L) + ಕ್ರಾಂತಿ @ 2mL/L

 

III- ಮೂರನೇ ಸಿಂಪರಣೆ- ಅಸಿಫೇಟ್ (ಅಸಟಾಫ್ @ 2gm/L ಅಥವಾ ಸ್ಟಾರ್ಥೇನ್ @ 2gm/L ಅಥವಾ ಲ್ಯಾನ್ಸರ್ ಗೋಲ್ಡ್ @ 1.5-2 gm/L) + ಮೈಕ್ಲೋಬುಟಾನಿಲ್ (ಇನ್ಡೋಫಿಲ್ ಬೂನ್ @ 1gm/L ಅಥವಾ ಸಿಸ್ಥೇನ್ @ 1gm/L) + ತಪಸ್ ತೇಜ್ ಈಲ್ಡ ಬೂಸ್ಟರ್ @ 2 mL/L

ಸೂಚನೆ:

  1. ಹೂಬಿಡುವಿಕೆಯ ಮುನ್ನ ಸಿಂಪರಣೆಯನ್ನು ಮಾಡಿ ತದನಂತರ 15 ದಿನಗಳ ಅಂತರದಲ್ಲಿ ಮುಂದಿನ ಸಿಂಪರಣೆಯನ್ನು ಮಾಡಿ

 

  1. ಮಾವು ಹೂಬಿಡುವಿಕೆ ಸಮಯದಲ್ಲಿ ಬರುವಂತಹ ಇನ್ನೊಂದು ಗಂಭೀರ ಸಮಸ್ಯೆಯೆಂದರೆ ಬೂದು ರೋಗ. ಮಾವು ಬೆಳೆಯುವ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಮೇಲೆ ತಿಳಿಸಿರುವ ಸಂಯೊಜನೆಗಳು ಜಿಗಿ ಹುಳುವಿನ ನಿರ್ವಹಣೆಯ ಜೊಗೆಗೆ ಬೂದು ರೋಗವನ್ನು ಸಹ ಹತೋಟಿಯಲ್ಲಿಡುತ್ತದೆ ಹಾಗೂ ಒಳ್ಳೆಯ ಬೆಳವಣಿಗೆ ಮತ್ತು ಉತ್ತಮ ಗುಣಮಟ್ಟದ ಹಣ್ಣುಗಳ ಇಳುವರಿಯನ್ನ ನೀಡುತ್ತದೆ.

 

  1. ಹೂವು ಬಿಡುವಿಕೆ ಅತ್ಯಂತ ಗರಿಷ್ಟ ಮಟ್ಟದಲ್ಲಿದ್ದಾಗ ಕೃತಕ ಪೈರಿಥ್ಯ್ರೋಡ್ಸ್ ಉತ್ಪನ್ನಗಳನ್ನ (ರೀವಾ 2.5 @ 2-2.5 mL/L ಅಥವಾ ರೀವಾ 5 @ 1-1.5 mL/L) ಸಿಂಪರಣೆ ಮಾಡಿ ಅಥವಾ ಡೈಮಿಥೋಯೇಟ್ ಅನ್ನು ಕಾಂಡಕ್ಕೆ ಸೇರಿಸಿ ಇದರಿಂದ ಪರಾಗಸ್ಪರ್ಶದ ಮೇಲೆ ಬೀರುವ ಕೆಟ್ಟ ಪರಿಣಾವನ್ನ ನಿಯಂತ್ರಿಸಬಹುದು.

**********

 

Dr. Asha, K.M.,

BigHaat

______________________________________________________________

ಹೆಚ್ಚಿನ ಮಾಹಿತಿಗಾಗಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ದಯಮಾಡಿ 8050797979 ನಂಬರ್ ಗೆ ಕರೆ ಮಾಡಿ ಅಥವಾ 180030002434 ನಂಬರ್ ಗೆ ಮಿಸ್ಡ್ ಕಾಲ್ ನೀಡಿ.

____________________________________________________________

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.

 

                                             **************


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this