ಬಳ್ಳಿ ಜಾತಿಯ ಬೆಳೆಗಳಲ್ಲಿ ಹಣ್ಣು ಕೊಳೆ ರೋಗವನ್ನು ನಿರ್ವಹಿಸಿ
ಬಳ್ಳಿ ಜಾತಿಯ ಬೆಳೆಗಳು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಪ್ರಮುಖ ತರಕಾರಿ ಬೆಳೆಗಳಾಗಿವೆ. ಈ ಬೆಳೆಗಳನ್ನು ಬೇಸಿಗೆ ಮತ್ತು ಮಳೆಗಾಲದ ಬೆಳೆಗಳೆಂದು ಪರಿಗಣಿಸಲಾಗುತ್ತದೆ, ಆದರೆ ಹೀಗಿನ ದಿನಗಳಲ್ಲಿ ರೈತರು ಹೆಚ್ಚಿನ ಮಾರುಕಟ್ಟೆ ಬೆಲೆಯನ್ನು ಪಡೆಯಲು ಬೇಗನೆ ಬೆಳೆಯಲು (ಮಾರ್ಚ್ ಮತ್ತು ಏಪ್ರಿಲ್) ಆದ್ಯತೆ ನೀಡುತ್ತಾರೆ. ಈ ಬಳ್ಳಿ ಜಾತಿಯ ಬೆಳೆಗಳು ಅದರ ಜೀವನ ಚಕ್ರದಲ್ಲಿ ಹಲವು ರೋಗಗಳನ್ನು ಎದುರಿಸುತ್ತವೆ.
ಬಳ್ಳಿ ಜಾತಿಯ ಬೆಳೆಗಳಲ್ಲಿ ಹಣ್ಣುಕೊಳೆತವು ಒಂದು ಪ್ರಮುಖ ರೋಗವಾಗಿದ್ದು, ಇದು ಫೈಟೊಫ್ಥೊರಾ ಕ್ಯಾಪ್ಸಿಕಾ (ಫೈಟೊಫ್ಥೊರಾ ಹಣ್ಣಿನ ಕೊಳೆತ) ಮತ್ತು ಸ್ಕ್ಲೆರೊಟಿನಿಯಾ ಸ್ಕ್ಲೆರೋಟಿಯೊರಮ್ (ಸ್ಕ್ಲೆರೊಟಿನಿಯಾ ಹಣ್ಣಿನ ಕೊಳೆತ) ಎನ್ನುವ ಶಿಲೀಂಧ್ರಗಳಿಂದ ಉಂಟಾಗುತ್ತದೆ.
ಸಾಮಾನ್ಯವಾಗಿ ಹಣ್ಣಿನ ಕೊಳೆತವು ಹಣ್ಣು ಮಣ್ಣನ್ನು ತಾಕುವ ಭಾಗದಲ್ಲಿ ಮತ್ತು ಹಣ್ಣಿನ ಕೊಳೆ ರೋಗವಿರುವ ಎಲೆಯು ಹಣ್ಣಿನ ಮೇಲೆ ಬಿದ್ದಾಗ ಈ ರೋಗವು ಹರಡುತ್ತದೆ.
ಪ್ರಮುಖ ಕಾರಣಗಳು:
1. ಹೆಚ್ಚಿನ ತೇವಾಂಶ ಇದ್ದಾಗ ಬಳ್ಳಿಜಾತಿಯ ಜಾತಿಯ ಬೆಳೆಗಳಲ್ಲಿ ಹಣ್ಣಿನ ಕೊಳೆ ರೋಗವು ಹೆಚ್ಚಾಗಿರುತ್ತದೆ, ತೇವಾಂಶ ಮತ್ತು 25-30 °C ನಡುವಿನ ತಾಪಮಾನವು ಹಣ್ಣು ಕೊಳೆ ರೋಗ ಶಿಲೀಂಧ್ರದ ಹರಡುವಿಕೆಗೆ ಹೆಚ್ಚು ಅನುಗುಣವಾಗಿರುತ್ತದೆ.
2. ರೋಗವಿರುವ ಬೆಳೆ ಕತ್ತರಿಸಲು ಬಳಸುವ ಸಾಧನಗಳನ್ನು ಬಳಸುವಾಗಲೂ ಹಣ್ಣು ಕೊಳೆ ರೋಗವು ವರ್ಗಾವಣೆಯಾಗುತ್ತದೆ.
3. ನಿರಂತರವಾಗಿ ಬಳ್ಳಿ ಜಾತಿಯ ಬೆಳೆಗಳನ್ನು ಬೆಳೆಯುವುದರಿಂದ ಹಣ್ಣು ಕೊಳೆ ರೋಗದ ಸಂಭವವು ಹೆಚ್ಚಾಗಿರುತ್ತದೆ.
ಫೈಟೊಪ್ಥೆರಾ ಹಣ್ಣು ಕೊಳೆ ರೋಗದ ಲಕ್ಷಣಗಳು:
ಹಣ್ಣಿನ ಮೇಲೆ ನೀರು ಕೂಡಿದ ಚುಕ್ಕೆಗಳು ಕಂಡುಬರುತ್ತದೆ , ನಂತರ ವೃದ್ಧಿಗೊಂಡು ಹಣ್ಣು ಕೊಳೆಯುವಂತೆ ಮಾಡುತ್ತವೆ. ಹೆಚ್ಚಾಗಿ ಮಣ್ಣಿಗೆ
ತಾಕುವ ಭಾಗವು ಹಣ್ಣು ಕೊಳೆ ರೋಗಕ್ಕೆ ತುತ್ತಾಗುತ್ತದೆ.
ಶಿಲೀಂದ್ರವು ಬಿಳಿ ಬುರುಗು ಬೆಳವಣಿಗೆಯನ್ನು ಉಂಟುಮಾಡುತ್ತದೆ ಹಾಗು ಸಂಪೂರ್ಣವಾಗಿ ಹಣ್ಣನ್ನು ಆವರಿಸಬಹುದು, ಅಂತಿಮವಾಗಿ ಹಿಡೀ ತೋಟವೇ ನಾಶವಾಗಬಹುದು.
ಸ್ಕ್ಲೆರೊಟಿನಿಯಾ ಹಣ್ಣು ಕೊಳೆ ರೋಗದ ಲಕ್ಷಣಗಳು:
ಹಣ್ಣುಗಳ ಮೇಲೆ ಪ್ರಮುಖ ಬಿಳಿ ಕವಕಜಾಲದ ಬೆಳವಣಿಗೆ ಕಂಡುಬರುತ್ತದೆ. ಹಣ್ಣುಗಳು ತೇವಾಂಶವುಳ್ಳ ಮಣ್ಣಿನಲ್ಲಿರುವಾಗ ಬಿಳಿ ಕವಕಜಾಲವು ಹಣ್ಣಿನ ಮೇಲೆ ಮತ್ತು ಕೆಳಗೆ ವಿಸ್ತರಿಸುತ್ತವೆ ಮತ್ತು ಹಣ್ಣುಗಳು ಸಂಪೂರ್ಣ ಕೊಳೆಯುವಿಕೆಗೆ ಒಳಗಾಗುತ್ತವೆ. ಅಂತಿಮವಾಗಿ, ಹಣ್ಣುಗಳು ಹೇರಳವಾಗಿ ಸಣ್ಣದಿಂದ ದೊಡ್ಡದಾದ, ಅಂಡಾಕಾರದ, ವೃತ್ತಾಕಾರದ ಮತ್ತು ಅನಿಯಮಿತ ಸ್ಕ್ಲೆರೋಟಿಯಾದಿಂದ ಆವರಿಸುತ್ತದೆ.
ನಿರ್ವಹಣೆ:
- ಒಂದೇ ತೋಟದಲ್ಲಿ ಬೇರೆ ಬೇರೆ ಬೆಳೆಗಳನ್ನು (ಬೆಳೆ ಪರಿವರ್ತನೆ) ಬೆಳೆಯಬೇಕು.
- ಹೆಚ್ಚಿನ ನೀರು ಬಸಿದುಹೋಗುವಂತಹ ತೋಟವನ್ನು ಆಯ್ಕೆ ಮಾಡಿ ಮಣ್ಣಿನ ತೇವಾಂಶ ಕಾಪಾಡುವುದು, ತಗ್ಗು ಪ್ರದೇಶಗಳನ್ನು ತಪ್ಪಿಸುವ ಮೂಲಕ,ಬಳ್ಳಿಗಳು ಹಬ್ಬಲು ಚಪ್ಪರವನ್ನು ಹಾಕಿ, ಹೆಚ್ಚಿನ ನೀರಾವರಿ ಕೊಡಬಾರದು.
- ಶುದ್ಧೀಕರಿಸಿದ ಉಪಕರಣಗಳ ಬಳಕೆ ಮಾಡಬೇಕು.
ರಾಸಾಯನಿಕ ನಿಯಂತ್ರಣ:
ಕ್ರ. ಸಂ. |
ರಾಸಾಯನಿಕ ಹೆಸರು |
ವ್ಯಾಪಾರದ ಹೆಸರು |
ಪ್ರತಿ ಲೀಟರ್ ನೀರಿಗೆ |
1 |
ಅಜಾಕ್ಸಿಸ್ಟ್ರೋಬಿನ್ + ಡಿಫೆನೊಕೊನಜೋಲ್ |
0.5 ಮಿಲಿ |
|
2 |
ಡಿಮೆಥೊಮಾರ್ಫ್ 50% WP |
1 ಗ್ರಾಂ |
|
3 |
ಹೆಕ್ಸಕೋನಜೋಲ್ 5% + ಕ್ಯಾಪ್ಟನ್ 70% (75% WP) |
2 ಗ್ರಾಂ |
|
4 |
ಕ್ಲೋರೊಥಲೋನಿಲ್ |
2 ಗ್ರಾಂ |
|
5 |
ಟೆಬುಕೊನಜೋಲ್ 250 ಇಸಿ (25.9% w / w) |
1-1.5 ಮಿಲಿ |
|
6 |
ಇಪ್ರೊವಾಲಿಕಾರ್ಬ್ + ಪ್ರೊಪಿನೆಬ್ 6675 WP (5.5% + 61.25% w / w) |
2.5-3 ಗ್ರಾಂ |
|
7 |
ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64%. (72% WP) |
1.5-2 ಗ್ರಾಂ |
|
8 |
ಮೆಟಾಲಾಕ್ಸಿಲ್ 35% WS |
0.5-0.75 ಗ್ರಾಂ |
|
9 |
ಸೈಮೋಕ್ಸಾನಿಲ್ 8% + ಮ್ಯಾಂಕೋಜೆಬ್ 64% |
1.5-2 ಗ್ರಾಂ |
|
10 |
ಕ್ಲೋರೊಥಲೋನಿಲ್ + 37.5 ಗ್ರಾಂ/ಲೀ ಮೆಟಾಲಾಕ್ಸಿಲ್-ಎಂ |
1.5-2 ಗ್ರಾಂ |
ಜೈವಿಕ ನಿಯಂತ್ರಣ:
ಕ್ರ. ಸಂ. |
ರಾಸಾಯನಿಕ ಹೆಸರು |
ವ್ಯಾಪಾರದ ಹೆಸರು |
1 |
ಟ್ರೈಕೊಡರ್ಮಾ |
ಆಲ್ಡರ್ಮ್ @ 2-3 ಮಿಲಿ / ಲೀ ಅಥವಾ ಸಂಜೀವ್ನಿ @ 20 ಗ್ರಾಂ / ಲೀ ಅಥವಾ ಟ್ರೀಟ್ ಬಯೋ-ಫಂಗಿಸೈಡ್ 20 ಗ್ರಾಂ / ಲೀ ಅಥವಾ ಮಲ್ಟಿಪ್ಲೆಕ್ಸ್ ನಿಸರ್ಗಾ @ 1 ಎಂಎಲ್ / ಲೀ |
2 |
ಸ್ಯೂಡೋಮೊನಾಸ್ |
ಬಯೋ-ಜೋಡಿ @ 20 ಗ್ರಾಂ / ಲೀ ಅಥವಾ ಬ್ಯಾಕ್ಟೈಪ್ @ 1 ಮಿಲಿ / ಲೀ ಅಥವಾ ಇಕೋಮೊನಾಸ್ 20 ಗ್ರಾಂ / ಲೀ ಅಥವಾ ಸ್ಪಾಟ್ @ 1 ಮಿಲಿ / ಲೀ ಅಥವಾ ಅಲ್ಮೋನಾಸ್ @ 2-3 ಮಿಲಿ / ಲೀ |
3 |
ಗ್ಲೋಮಸ್ |
ಮೈಕೊಜೂಟ್ಸ್ @ 0.5 ಗ್ರಾಂ / ಲೀ |
*************************
Manjula G. S.
SME, BigHaat.
Leave a comment