ಬೇಸಿಗೆಯಲ್ಲಿ ಅತ್ಯುತ್ತಮ ಟೊಮ್ಯಾಟೊ ಸಂಕರಣ ತಳಿ (ಹೈಬ್ರಿಡ್) ಬೆಳೆಯಿರಿ: ಹೆಚ್ಚುಲಾಭ ಗಳಿಸಿ

ಟೊಮ್ಯಾಟೊ ಭಾರತದ ಅತ್ಯಂತ ವ್ಯಾಪಕವಾಗಿ ಬೆಳೆಯುವ ವಾಣಿಜ್ಯ ತರಕಾರಿ ಬೆಳೆಯಾಗಿದೆ. ಇದರಲ್ಲಿ ಔಷಧೀಯ ಮೌಲ್ಯಗಳು ಹೆಚ್ಚಾಗಿದ್ದು, ಅಧಿಕ ಜೀವಸತ್ವಗಳು ಮತ್ತು ಖನಿಜಗಳನ್ನು ಪ್ರಮುಖವಾಗಿ ಹೊಂದಿದೆ.

ಇತ್ತೀಚೆಗೆ ಟೊಮ್ಯಾಟೊ ಹಣ್ಣನ್ನು ಹಸಿ (ಸಲಾಡ್) ತರಕಾರಿಯಾಗಿಯೂ ಬಳಸುತ್ತಾರೆ ಮತ್ತು ಸಾಮಾನ್ಯವಾಗಿ ಸಂಸ್ಕರಣೆಗೆ ಅಂದರೆ ಸೂಪ್, ಉಪ್ಪಿನಕಾಯಿ, ಕೆಚಪ್, ಸಾಸ್, ಪೇಸ್ಟ್, ಪುಡಿ, ಜ್ಯೂಸ್ ಇತ್ಯಾದಿ ಉತ್ಪನ್ನಗಳನ್ನು ಮಾಡಲು ಬಳಸುತ್ತಾರೆ.

ಇದು ಹೃದಯ ಸಂಬಂಧಿತ ಮತ್ತು ಕ್ಯಾನ್ಸರ್ ಗಳಂತಹ ಅಪಾಯಕಾರಿ ರೋಗಗಳನ್ನು ಕಡಿಮೆ ಮಾಡುವಂತಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಕೆ, ಲೈಕೋಪೀನ್ ಮತ್ತು ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

ಬೇಸಿಗೆಯಲ್ಲಿ ಟೊಮ್ಯಾಟೊ  ತಳಿ/ ಸಂಕರಣ ತಳಿ ಗಳನ್ನು ಬೆಳೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು:

  • ನೀರಿನ ಆವಿಯಾಗುವಿಕೆಯ ನಷ್ಟವನ್ನು ತಪ್ಪಿಸಲು, ಮಣ್ಣನ್ನು ಹೆಚ್ಚು ಬಿಸಿಯಾಗದಂತೆ ತಡೆಯಲು ಮತ್ತು ಕಳೆ ನಿರ್ವಹಿಸಲು  ಹಸಿಗೊಬ್ಬರ ಅಥವಾ ಪ್ಲಾಸ್ಟಿಕ್ ಹೊದಿಕೆ/ ಹಾಳೆಯನ್ನು ಬಳಸಿ.
  • ನೀರಿನ ಮೂಲಗಳ ಪರಿಣಾಮಕಾರಿ ಬಳಕೆಗಾಗಿ ಹನಿ ನೀರಾವರಿ ಪದ್ದತಿ ಬಳಸಿ.
  • ಅವಶ್ಯಕತೆಯ ಆಧಾರದ ಮೇಲೆ ನೀರಾವರಿಯನ್ನು ಹೆಚ್ಚಿಸಬಹುದು, ಆದರೆ ತುಂಬಾ ದಿನ ನೀರು ಕೊಡದೆ ಒಂದೇಬಾರಿ ಹೆಚ್ಚು ನೀರಾವರಿ ನೀಡುವುದರಿಂದ ಹಣ್ಣು ಬಿರುಕು ಬಿಡುವುದಕ್ಕೆ ಕಾರಣವಾಗುತ್ತದೆ.

  • ಸೂರ್ಯನ ನೇರ ಕಿರಣಗಳು ಬೀಳುವ ಬದಿಯಲ್ಲಿರುವ ಟೊಮ್ಯಾಟೊ ಗಿಡಗಳ ಸುತ್ತ ಆರು ಅಡಿ ಎತ್ತರದ ನೆರಳು ಪರದೆಯನ್ನು ಹಾಕಿರಿ. ನೆರಳು ಪರದೆಯು ಗಿಡಗಳಿಗೆ ಬೇಕಾದ ಬೆಳಕನ್ನು ಅನುಮತಿಸುತ್ತದೆ ಮತ್ತು ಅದರ ಕಿರಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ,ಇದರಿಂದ ಟೊಮ್ಯಾಟೊ ಹಣ್ಣುಗಳು ಸೂರ್ಯನ ಶಾಖದಿಂದ ಬಳಲುವುದಿಲ್ಲ.
  • ಟೊಮ್ಯಾಟೊ ಸಸ್ಯಗಳ ಬೆಳವಣಿಗೆಯನ್ನು ವೃದ್ಧಿಸಲು, ಅತ್ಯಂತ ಬಿಸಿ ವಾತಾವರಣದಲ್ಲಿ ರಸಗೊಬ್ಬರ ಹಾಕುವುದನ್ನು ನಿಲ್ಲಿಸಿ.

ಈ ಪದ್ಧತಿಗಳನ್ನು ಹೊರತುಪಡಿಸಿ, ನಿಮ್ಮ ತೋಟದಲ್ಲಿ ಬೇಸಿಗೆಯಲ್ಲಿ ಟೊಮ್ಯಾಟೊ ಬೆಳೆಯಬೇಕಾದರೆ ಕ್ರಮಬದ್ಧ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.   

 

ಬೇಸಿಗೆಯಲ್ಲಿ ಬೆಳೆಯಬಹುದಾದ ಟೊಮ್ಯಾಟೊ ಸಂಕರಣ ತಳಿಗಳ ವಿಭಾಗವಾರು ಪಟ್ಟಿ:

 ಅಂಡಾಕಾರ - ಅಭಿನವ್, TO- 1057, NS-501, ಆಯುಷ್ಮಾನ್, TO-6242, ಅನ್ಸಲ್, ಇತ್ಯಾದಿ

ಗೋಳಾಕಾರ - ಸಾಹೋ, ಸಾಕ್ಷಾಮ್, ಶ್ರೇಯಾ, ಅಭಿಲಾಶ್, ಯುಎಸ್- 440, ಪಿಹೆಚ್ಎಸ್ ಸ್ವೀಕರ್ 448, ಸಿಕಂದರ್, ಎನ್ಎಸ್ -555, ಹೀಮ್ಶಿಕರ್, ಹೀಮ್ಸೋಹ್ನಾ, ರೂಬಿ ಕೆಂಪು, ಇತ್ಯಾದಿ

ಟೊಮೆಟೊದ ಹೆಚ್ಚಿನ ಬೇಸಿಗೆ ಸಂಕರಣ ತಳಿ/ ಪ್ರಭೇದಗಳನ್ನು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ:

https://www.bighaat.com/collections/summer-tomato-varieties

***********

Manjula G. S.

Agronomist, BigHaat 

 

***********

For more information kindly call on 8050797979 or give missed call on 180030002434 during office hours 10 AM to 5 PM

------------------------------------------------------------------------------------------------

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.

   ***********


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this