ಬದನೇಕಾಯಿ (ಸೋಲಾನಮ್ ಮೆಲೋಂಜಿನಾ ಎಲ್.) ಬೆಳೆಯಲ್ಲಿ ಹಣ್ಣು ಮತ್ತು ಕೊಂಬೆ ಕೊರೆಯುವ ಹುಳುವಿನ ನಿರ್ವಹಣಾ ಕ್ರಮಗಳು
ಮುನ್ನುಡಿ :- ಬದನೆಯನ್ನು ದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಸಾಮಾನ್ಯವಾಗಿ ಬೆಳೆಯಲಾಗುತ್ತದೆ.ಇದು ಬಯಲು ಸೀಮೆಯ ಪ್ರಮುಖ ತರಕಾರಿಯಾಗಿದ್ದು, ವರ್ಷವಿಡೀ ಹೆಚ್ಚು ಕಡಿಮೆ ಲಭ್ಯವಿರುತ್ತದೆ.ಇದರಲ್ಲಿ ಹೆಚ್ಚಾಗಿ 'ಎ' ಮತ್ತು 'ಬಿ' ಜೀವಸತ್ವಗಳಿದ್ದುಈ ತರಕಾರಿಯು ಮಧುಮೇಹ ರೋಗಗಳಿಗೆ ಒಳ್ಳೇದಾಗಿದೆ. ಬದನೇಕಾಯಿ ಬೆಳೆಯನ್ನು ವರ್ಷದಾದ್ಯಂತ ಎಲ್ಲಾ ತೆರೆನಾದ ಮಣ್ಣುಗಳಲ್ಲಿ ಬೆಳೆಯಬಹುದು, ಅದರಲ್ಲೂ ನೀರು ಬಸೆದು ಹೋಗುವಂತಹ ಗೋಡು ಮಣ್ಣುಈ ಬೆಳೆಗೆ ಅತೀ ಸೂಕ್ತ.
ಬದನೆಕಾಯಿ ಬೆಳೆಯ ಪ್ರಮುಖ ಕೀಟಗಳೆಂದರೆ:-
- ಕೊಂಬೆ ಮತ್ತು ಹಣ್ಣು ಕೊರೆಯುವ ಹುಳು
- ಬದನೆ ಕಾಂಡ ಕೊರಕ
- ಹಡ್ಡಾ / ಮಚ್ಚೆಯುಳ್ಳ ಜೀರುಂಡೆ
- ಬೂದಿ ಜೀರುಂಡೆ/ಬದನೆ ಬೂದಿ ಜೀರುಂಡೆ
- ನುಸಿ
- ಕೆಂಪು ಜೇಡ ಮೈಟ್ ನುಸಿ
ಕೊಂಬೆ ಮತ್ತು ಕಾಯಿ/ಹಣ್ಣು ಕೊರೆಯುವ ಕೀಟ:
ಇದು ಬದನೆಕಾಯಿಯ ಪ್ರಮುಖ ಮತ್ತು ಗಂಭೀರ ಕೀಟಗಳಲ್ಲಿ ಒಂದಾಗಿದೆ. ಬದನೇಕಾಯಿ ಹಣ್ಣು ಮತ್ತು ಕೊಂಬೆ ಕೊರಕ "ಲ್ಯುಸಿನೋಡಸ್ ಅರ್ಬನಲಿಸ್" ಪತಂಗ ಜಾತಿಯಾಗಿದೆ.
ಕೀಟಗುರುತಿಸುವಿಕೆ:
- ಮೊಟ್ಟೆಗಳು: ಕೆನೆ ಬಿಳಿ ಮೊಟ್ಟೆಗಳು
- ಹುಳು(ಲಾರ್ವಾ) : ಗುಲಾಬಿ ಬಣ್ಣ
- ಕೋಶ (ಪ್ಯೂಪಾ) : ಬೂದು ಬಣ್ಣದ ದೋಣಿಯಾಕಾರದ ಕೋಶ
- ವಯಸ್ಕ ಚಿಟ್ಟೆ: ಮಧ್ಯಮ ಗಾತ್ರದ ಪತಂಗ. ಮುಂಭಾಗದ ರೆಕ್ಕೆಗಳು ಕಪ್ಪು ಮತ್ತು ಕಂದು ಬಣ್ಣದ ತೇಪೆಗಳನ್ನು ಮತ್ತು ಬಿಳಿ ಬಣ್ಣದ ಮೇಲೆ ಚುಕ್ಕೆಗಳನ್ನು ಹೊಂದಿರುತ್ತವೆ, ಹಿಂದಿನ ರೆಕ್ಕೆಗಳು ಕಪ್ಪು ಚುಕ್ಕೆಗಳೊಂದಿಗೆ ಅಪಾರ ದರ್ಶಕವಾಗಿರುತ್ತವೆ
ಬದನೇಕಾಯಿ ಬೆಳೆಯಲ್ಲಿ ಕೊಂಬೆ ಮತ್ತು ಹಣ್ಣು ಕೊರೆಯುವ ಹುಳುವಿನ ಹಾನಿಯ ಲಕ್ಷಣಗಳು
- ಬದನೇಕಾಯಿಯ ಕೊಂಬೆ ಮತ್ತು ಹಣ್ಣು ಕೊರೆಯುವ ಹುಳುಗಳು ಕಾಯಿಗಳ ತೊಟ್ಟುಗಳು ಮತ್ತು ಕೋಮಲ ಚಿಗುರು ಕೊಂಬೆಗಳಲ್ಲಿ ಕೊರೆಯುತ್ತವೆ. ಇಲ್ಲಿ ಎಳೆಕೊಂಬೆಗಳ ಎಲೆಗಳು ಇಳಿ ಬೀಳುವಿಕೆ ಮತ್ತು ಹೂವಿನ ಮೊಗ್ಗುಗಳು ಉದುರುವಿಕೆಯನ್ನು ಕಾಣಬಹುದು..
- ಮರಿಹುಳುಗಳು ಕಾಯಿ/ಹಣ್ಣುಗಳ ಒಳಗೆ ಸುರಂಗ ಮಾರ್ಗವಾಗಿ ಕೊರೆದು, ಒಳಗೆ ತಿರುಳನ್ನು ತಿನ್ನುತ್ತಾ ಬೆಳೆಯುತ್ತಿರುವ ಕಾಯಿ/ಹಣ್ಣುಗಳಿಗೆ ತೀವ್ರ ಹಾನಿಯನ್ನುಂಟು ಮಾಡುತ್ತವೆ.
- ಅಂದಾಜು ಒಂದು ಲಾರ್ವಹುಳು 4-6 ಹಣ್ಣುಗಳನ್ನು ನಾಶ ಪಡಿಸಬಹುದು. ಹಾನಿಗೊಳಗಾದ ಹಣ್ಣುಗಳು ವೃತ್ತಾಕಾರದ ಹುಳುಗಳ ನಿರ್ಗಮನ ರಂಧ್ರಗಳನ್ನು ಹೊಂದಿರುತ್ತವೆ.
- ಬದನೆಕಾಯಿ ಮೇಲಿನ ಪ್ರವೇಶ ರಂಧ್ರಗಳು ತಮ್ಮ ಮಲ ಹಿಕ್ಕುವಿನಿಂದ ಮುಚ್ಚಿರಿವುದು ಕಾಣಬಹುದು. ಹೀಗಾಗಿಕಾಯಿ/ಹಣ್ಣುಗಳು ಸೇವನೆ ಮತ್ತು ಮಾರಾಟಕ್ಕೆ ಅನರ್ಹವಾಗುತ್ತವೆ
ಬದನೇ ಕಾಯಿ ಹಣ್ಣು ಮತ್ತು ಕೊಂಬೆ ಕೊರೆಯುವ ಹುಳುವಿನ ನಿರ್ವಹಣೆ:
ಕಾಯಿ/ಹಣ್ಣು ಮತ್ತು ಕೊಂಬೆ ಕೊರೆಯುವ ಹುಳುವಿನ ಜೀವನ ಚಕ್ರವನ್ನು ಅರ್ಥಮಾಡಿ ಕೊಂಡರೆ, ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರ ಕೀಟನಿರ್ವಹಣೆ ವಿಧಾನವನ್ನುಅಳವಡಿಸಿ ಕೊಳ್ಳಬಹುದು.
- ಬೆಳೆ ಪರಿವರ್ತನೆ: ಬೆಳೆ ಪರಿವರ್ತನೆ ಪಾಲಿಸಿದರೆ, ಕೀಟದ ಜೀವನ ಚಕ್ರವನ್ನು ಬದಲಾಯಿಸಿ ಹುಳುವಿನ ಹಾವಳಿಯ ತೀವ್ರತೆಯನ್ನುಕಡಿಮೆ ಗೊಳಿಸಬಹುದು.
- ಯಾಂತ್ರಿಕ ವಿಧಾನ:
- ದಾಳಿಯುಕ್ತ ಎಲೆಗಳನ್ನು, ಕೊಂಬೆಗಳನ್ನು ಮತ್ತು ಕಾಯಿ/ಹಣ್ಣುಗಳನ್ನು ತೆಗೆದು ಕೀಟದ ಎಲ್ಲಹಂತಗಳನ್ನು ನಾಶಮಾಡುವುದು
- ಭಾರೀದಾಳಿಗೆ ಒಳಗಾಗಿರುವ ಸಸ್ಯಗಳನ್ನು ಕಿತ್ತುಹಾಕಬಹುದು ಮತ್ತುಅದನ್ನು ಸುಡುವುದು ಒಳ್ಳೆಯದು.
3. ಜೈವಿಕ ವಿಧಾನ: ಇತ್ತೀಚಿನ ದಿನಗಳಲ್ಲಿ ಬದನೆಕಾಯಿ ಕೊರಕ ಕೀಟಗಳು ರಸಾಯನಿಕಗಳಿಗೆ ನಿರೋಧಕತೆಯನ್ನೂ ತೋರುತ್ತಿವೆ. ಆದರಿಂದ, ಒಮ್ಮೆ ಜೈವಿಕ ಕೀಟನಾಶಕಗಳ ಬಳಕೆ ಮಾಡಿದರೆ ಹತೋಟಿ ತರಲು ಉತ್ತಮವಾಗಬಹುದು.
ಡೆಲಿಗೇಟ್ 0.9 ml/l OR ಏಕೋನೀಮ್ಪ್ಲಸ್ 10000ppm @ 1 ml/ l ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.
ಜೈವಿಕ ಕೀಟನಾಶಕಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ಅನ್ನು ಹೊತ್ತಿರಿ :-https://www.bighaat.com/collections/insects-brinjalfruitandshootborer-biological
4. ರಾಸಾಯನಿಕ ವಿಧಾನ:
- ಮೊಟ್ಟೆ ನಿರ್ವಹಣೆ :
ಎಲೆಗಳು, ಕೊಂಬೆಗಳು ಮತ್ತು ಕಾಯಿ/ಹಣ್ಣುಗಳ ಮೇಲೆ ಚಿಟ್ಟೆಗಳು ಮೊಟ್ಟೆಗಳನ್ನು ಇಡುತ್ತವೆ. ಈ ಹಂತದಲ್ಲಿ ಮೊಟ್ಟೆಗಳನ್ನು ನಾಶ ಮಾಡಲು ಸೂಕ್ತ ಮೊಟ್ಟೆ ನಾಶಕಗಳನ್ನು ಸಿಂಪಡಿಸಬಹುದು
ಸ್ಯಾನ್ವೆಕ್ಸ್ಎಸ್.ಪಿ - 2 ಗ್ರಾಂ/ ಲೀಟರ್ OR ಕಾರ್ಬೊಮಿನ್ ಕೀಟನಾಶಕ ೨ ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.
- ಹುಳು ನಿರ್ವಹಣೆ: ಹುಳುಗಳು ಕೊಂಬೆಗಳನ್ನು ಮತ್ತು ಕಾಯಿ/ಹಣ್ಣುಗಳ ಒಳಗೆ ಮಲದ ಹಿಕ್ಕುಗಳು ಆವರಿಸುವುದರಿಂದ, ಹೆಚ್ಚು ವಿಶಾಲ ವರ್ಣಪಟಲ (ಸ್ಪೆಕ್ಟ್ರಮ್), ಸಸಿ -ಕಾಯಿಗಳ ತಿರುಳಒಳಗೆ ನುಸಳಬಲ್ಲ [ ಟ್ರಾನ್ಸ್ಲಾಮಿನಾ ರ್ಕ್ರಿಯಾತ್ಮಕ) ಕೀಟನಾಶಕಗಳು ಬಳಕೆಯಿಂದ ಮಾತ್ರ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಪಾಲಿಟ್ರಿನ್ : 2-3 ಮಿಲಿ/ಲೀ ಅಥವಾ ಕೇಂಕಾರ್ನ್ 2-3 ಮಿಲಿ/ಲೀ ಅಥವಾ ಬೆಲ್ಟ್ಎಕ್ಸ್ಪರ್ಟ್ 0.5 ಮಿಲಿ/ಲೀ ಅಥವಾ ಮಾರ್ಷಲ್ 2-3 ಮಿಲಿ/ಲೀ + ಏಕೋನೀಂ 1 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು.
https://www.bighaat.com/collections/insects-brinjalfruitandshootborer-chemical
ಬದನೇ ಕಾಯಿ/ಹಣ್ಣು ಮತ್ತು ಕೊಂಬೆ ಕೊರೆಯುವ ಹುಳುವಿನ ನಿರ್ವಹಣೆಯಲ್ಲಿ ಮೋಹಕ ಬಲೆಗಳ ಬಳಕೆ
- ಕಾಯಿ/ಹಣ್ಣು ಮತ್ತು ಕೊಂಬೆ ಕೊರಕ ಪತಂಗಗಳ ಹೊರ ಹೊಮ್ಮುವಿಕೆ, ಗಂಡು ಹೆಣ್ಣುಒಂದಾಗುವಿಕೆ ಮತ್ತು ಮೊಟ್ಟೆಇಡುವುದು ಬಹಳ ಕಡಿಮೆ ಸಮಯದಲ್ಲಿ ಸಂಭವಿಸುತ್ತದೆ.
- ಈ ಕಡಿಮೆ ಸಮಯದಲ್ಲಿ ಗಂಡು -ಹೆಣ್ಣು ಒಂದಾಗುವಿಕೆಯನ್ನು ಯಾವುದೇ ಅಡ್ಡಿ ಉಂಟಾದರೆ, ಪತಂಗಗಳು ಫಲವತ್ತಾಗದ (ಫಲೀಕರಣವಾಗದ) ಮೊಟ್ಟೆಗಳನ್ನು ಮಾತ್ರ ಇಡುತ್ತವೆ ಅವು ಫಲವತ್ತಾಗಿರುವುದಿಲ್ಲ ಮತ್ತು ಆ ಮೊಟ್ಟೆಗಳಿಂದ ಹುಳುಗಳು ಎಂದಿಗೂ ಹೊರ ಬರುವುದಿಲ್ಲ.
- ಫಲೀಕರಣವನ್ನುಅಡ್ಡಿಪಡಿಸುವ ಒಂದು ಮಾರ್ಗವೆಂದರೆ ಗಂಡು -ಹೆಣ್ಣು ಒಂದಾಗುವಿಕೆಯನ್ನು ತಪ್ಪಿಸುವುದು.
- ಪ್ಯಾರಾ ಫೆರೋಮೋನ್ ಬಲೆಗಳು (ಟ್ರಾಪ್ಸ್) ಅಥವಾ ಮೋಹಕ ಬಲೆಗಳು ಹೆಣ್ಣು ಪತಂಗ ಪರಿಮಳವನ್ನು ಅನುಕರಿಸುತ್ತದೆ.
- ಬದನೆಕಾಯಿ ತೋಟದಲ್ಲಿ ಪ್ಯಾರಾ ಫೆರೋಮೋನ್ ಬಲೆಗಳು (ಟ್ರಾಪ್ಸ್) ಅಥವಾ ಮೋಹಕ ಬಲೆಗಳು ಬಳಸಿದಾಗ/ ಕಟ್ಟಿದಾಗ ,ಕಟ್ಟಿರುವ ಜಾಗದಲ್ಲಿ ಹೆಣ್ಣು ಪತಂಗಗಳ ಪರಿಮಳದ ಅನುಕರನೇ ಕಾರಣದಿಂದ ಗಂಡು ಪತಂಗಗಳು ಆಕರ್ಷಿತ ಗೊಂಡು ಕಟ್ಟಿರುವ ಬಲೆಗಳ ಹತ್ತಿರ ಬಂದು, ಅಲ್ಲಿಇಟ್ಟಿರುವ ಕೀಟನಾಶಕದ ಪರಿಣಾಮದಿಂದ ಕೊಲ್ಲಲ್ಪಡುತ್ತದೆ.
- ತೋಟದಲ್ಲಿ ಹರಡುವ ಹೆಣ್ಣು ಪತಂಗಗಳು ಗಂಡು ಪತಂಗಗಳ ಜೊತೆ ಸೇರದೆ (ಸಂಭೋಗಿಸದೆ) ಮೊಟ್ಟೆಇಡುತ್ತವೆ.ಆಮೊಟ್ಟೆಗಳು ಫಲೀಕರಣವಾಗದೆ ಮರಿಗಳು ಹುಟ್ಟುವುದಿಲ್ಲ. ಬದನೆಗಿಡಗಳಿಗೆ ಕಾಯಿ ಮತ್ತು ಕೊಂಬೆ ಕೊರಕ ಕೀಟದ ದಾಳಿ ತಪ್ಪುತ್ತದೆ.
ತಪಸ್ ಹಣ್ಣು ಮತ್ತು ಕೊಂಬೆ ಕೊರೆಯುವ ಹುಳುವಿನ ಮೋಹಕ ವಸ್ತು + ಬಲೆ
Created By:
Ashadevi k
SME-Fasteam
BigHaat.
++++++++++++++++++++++++++++++++++++++
For more information kindly call on 8050797979 or give missed call on 180030002434 during office hours 10 AM to 5 PM
------------------------------------------------------------------------
Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.
Leave a comment