ಕಲ್ಲಂಗಡಿ ಬೆಳೆಯಲ್ಲಿ ಹಣ್ಣು ನೊಣಗಳ ನಿರ್ವಹಣೆ

ಕಲ್ಲಂಗಡಿ ಹಣ್ಣು ನೊಣಗಳು [ಬ್ಯಾಕ್ಟ್ರೋಸೆರಾ ಕುಕುರ್ಬಿಟೇ -BACTROCERA CUCURBITAE], ಕಲ್ಲಂಗಡಿ ಬೆಳೆ ಹಣ್ಣುಗಳ ಮೇಲೆ ದಾಳಿ ಮಾಡುವ ಪ್ರಮುಖ ಕೀಟಗಳಲ್ಲಿ ಒಂದಾಗಿದೆ.

ಹಣ್ಣು ನೊಣ ದಾಳಿಯ ಲಕ್ಷಣ/ ಹಾನಿ ಗಳು

ಹಣ್ಣು ನೊಣಗಳು ಕಲ್ಲಂಗಡಿ ಹಣ್ಣುಗಳನ್ನು ಹಾನಿಗೊಳಿಸುವುದಿಲ್ಲ ಬದಲಿಗೆ ನೊಣಗಳ ಹುಳುಗಳು ಹಾನಿಕಾರಕ ಹಂತವಾಗಿದೆ. ವಯಸ್ಕ ನೊಣಗಳು ಫಲವತ್ತಾದ ಮೊಟ್ಟೆಗಳನ್ನು ಎಳೆಯ ಕಾಯಿಗಳು  ಮೇಲೆ ಅಥವಾ ಹೂವುಗಳ ಮೇಲೆ ಇಡುತ್ತದೆ. ಹಣ್ಣು ನೊಣಗಳು ಕಲ್ಲಂಗಡಿ ಬೆಳೆ ಇಲ್ಲದಿದ್ದಾಗ ಇತರ ಆತಿಥೇಯ ಬೆಳೆಗಳ ಮೇಲೆ ದಾಡಿ ಮಾಡುತ್ತ ವರ್ಷವಿಡೀ ಸಕ್ರಿಯವಾಗಿರುತ್ತದೆ.

  • ಮೊಟ್ಟೆಯಿಂದ ಹೊರಬಂದ ಹಣ್ಣು ನೊಣಗಳ ಮರಿಹುಳು(ಮ್ಯಾಗಟ್) ಕಾಯಿಯ ಒಳಗೆ ಪ್ರವೇಶಿಸಿ ತಿರುಳನ್ನು ತಿನ್ನಲಾರಂಭಿಸುತ್ತವೆ.
  • ಮರಿಹುಳು(ಮ್ಯಾಗಟ್) ಕಾಯಿಯ ಒಳಗೆ ಪ್ರವೇಶದ ಸ್ಥಳದಲ್ಲಿ ಕಾಯಿ/ ಹಣ್ಣುಗಳ ಮೇಲೆ ಸಣ್ಣ ರಂಧ್ರಗಳನ್ನು ಗಮನಿಸಬಹುದು.
  • ರಂಧ್ರವಾಗಿರುವ ಪ್ರದೇಶದಲ್ಲಿ ಅಂಟು ದ್ರವವು ಹೊರಬರುವುದನ್ನು ಗಮನಿಸಬಹುದು.
  • ಹಣ್ಣು ನೊಣಗಳ ಹಾನಿಯಾಗಿರುವ ಹಣ್ಣುಗಳು ಸಾಮಾನ್ಯವಾಗಿ ದೋಷಪೂರಿತವಾಗಿರುತ್ತವೆ, ಕೆಲವೊಮ್ಮೆ ವಿರೂಪಗೊಳ್ಳುತ್ತವೆ.
  • ಹಾನಿಯಾಗಿರುವ ಕಾಯಿಗಳು ಹಣ್ಣಾಗುವ ಮೊದಲೇ ಹಣ್ಣುಗಳು ಬಳ್ಳಿಯಿಂದ ಕಳಚಿ ಕೊಳ್ಳಬಹುದು.

ಹಣ್ಣು ನೊಣದ ನಿರ್ವಹಣೆ:

  1. ಕ್ಷೇತ್ರ /ಬೆಳೆ ಭೂಮಿ ನೈರ್ಮಲ್ಯ

ಕಲ್ಲಂಗಡಿ ಬೆಳೆ ಹಣ್ಣು ನೊಣ ನಿರ್ವಹಣೆಯಲ್ಲಿ ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಬೆಳೆ ಪ್ರದೇಶ /ಕ್ಷೇತ್ರ ನೈರ್ಮಲ್ಯವನ್ನು ಕಾಪಾಡುವುದು. ಹಣ್ಣು ನೊಣಗಳ ಸಂತಾನೋತ್ಪತ್ತಿ ಚಕ್ರ ಮತ್ತು ಅವುಗಳ ಸಂಖ್ಯೆಯ ಹೆಚ್ಚಳವನ್ನು ತಡೆಯಲು  ಬೆಳೆಗಾರರು ಎಲ್ಲಾ ಕೊಯ್ಲು ಮಾಡದ ಹಣ್ಣುಗಳು ಅಥವಾ ತರಕಾರಿಗಳನ್ನು ಸಂಪೂರ್ಣವಾಗಿ ಮಣ್ಣಿನಲ್ಲಿ ಹೂತುಹಾಕುವ ಮೂಲಕ ಹೊಲದಿಂದ ತೆಗೆದುಹಾಕಬೇಕಾಗುತ್ತದೆ. ಹಾನಿಗೊಳಗಾದ ಹಣ್ಣುಗಳನ್ನು ಮಣ್ಣಿನಲ್ಲಿ  ಅರ್ಧ ಮೀ ಆಳದಲ್ಲಿ ಹೂಳುವುದು ವಯಸ್ಕ ನೊಣಗಳ ತಪ್ಪಿಸಿಕೊಳ್ಳುವಿಕೆಯನ್ನು ತಡೆಯುತ್ತದೆ ಮತ್ತು ಸಂಖ್ಯೆಯ ಹೆಚ್ಚಳವನ್ನು ಕಡಿಮೆ ಮಾಡುತ್ತದೆ.

  1. ಹಳದಿ ಅಂಟು ಕಾಗದ ಬಳಕೆ- ಜಿಗುಟು ಬಲೆ

ವೈಜ್ಞಾನಿಕ ಕೀಟ ಶಾಸ್ತ್ರ ಅಧ್ಯಯನಗಳ ಪ್ರಕಾರ ಹಳದಿ ಬಣ್ಣವು ವಿವಿಧ ಕೀಟಗಳನ್ನು ವಿಶೇಷವಾಗಿ ವಯಸ್ಕ ನೊಣಗಳು ಮತ್ತು ಪತಂಗಗಳನ್ನು  ಆಕರ್ಷಿತ ಮಾಡಬಲ್ಲದು ಎಂದು ವರದಿ ಮಾಡಿವೆ. ಕೆಲವು ಕೀಟ ಪ್ರಭೇದಗಳಲ್ಲಿ ಹಣ್ಣು ನೊಣಗಳು, ಸೊಳ್ಳೆಗಳು, ಬಿಳಿ ನೊಣಗಳು, ಗಿಡಹೇನುಗಳು, ಜಿಗಿ ಹುಳುಗಳು, ರಂಗೋಲಿ ಹುಳುಗಳು, ಥ್ರಿಪ್ಸ್ ಮತ್ತು ಇತರ ಹಾರುವ ಕೀಟಗಳು ಹಳದಿ ಬಣ್ಣಕ್ಕೆ ಆಕರ್ಷಿತವಾಗುತ್ತವೆ ಎಂದು ಅಧ್ಯಯನಗಳಲ್ಲಿ ಉಲ್ಲೇಖವಾಗಿರುತ್ತದೆ.

ಕಲ್ಲಂಗಡಿ ಬೆಳೆಯಲ್ಲಿ ಹಣ್ಣು ನೊಣಗಳನ್ನು ಬಲೆಗೆ ಬೀಳಿಸಲು ಮತ್ತು ಮೊಟ್ಟೆ ಇಡುವುದನ್ನು ತಪ್ಪಿಸಲು, ಹಳದಿ ಬಣ್ಣದ ಹಾಳೆಗಳನ್ನು (ಸಾಮಾನ್ಯವಾಗಿ ಗಟ್ಟಿಯಾದ ಕಾಗದ) ಅಂಟು (ಗಮ್), ಬೆಲ್ಲ ಅಥವಾ ಎಣ್ಣೆಯಿಂದ ಲೇಪಿಸಿ,  ಹೂ ಬಿಡುವ ಹಂತದಲ್ಲಿರುವ ಹೊಲಗಳಲ್ಲಿ ಕಟ್ಟಬೇಕು.  ಹಣ್ಣು ನೊಣಗಳು ಹಳದಿ ಬಣ್ಣಕ್ಕೆ ಆಕರ್ಷಿತವಾಗುತ್ತವೆ, ಅವು ಲೇಪಿತ ಹಾಳೆಗಳನ್ನು ಸಮೀಪಿಸುತ್ತಿದ್ದಂತೆ, ಮೊಟ್ಟೆ ತುಂಬಿರುವ  ನೊಣಗಳು ಅಂಟಿಕೊಳ್ಳುತ್ತವೆ ಮತ್ತು ಸಾಯುತ್ತವೆ. ಕಟ್ಟಲು ಅಂಟು (ಜಿಗುಟು ಬಲೆ) ಲೇಪಿತ ಹಳದಿ ಕಾಗದಗಳು (ತಪಸ್ ಯಲ್ಲೋ ಸ್ಟಿಕಿ ಟ್ರ್ಯಾಪ್) ದೊರೆಯುತ್ತವೆ.

ಕಲ್ಲಂಗಡಿ ಹೊಲದಲ್ಲಿ ಜಿಗುಟಾದ ಬಲೆ

  1. ಲಿಂಗ ಆಕರ್ಷಕ ಪ್ಯಾರಾ ಫೆರೋಮೋನ್ ಬಲೆಗಳ ಬಳಕೆ

 ಹಣ್ಣು ನೊಣದ  ಹೆಣ್ಣು ವಯಸ್ಕ ನೊಣಗಳು ಕಲ್ಲಂಗಡಿ ಬೆಳೆಯ ಹೂವುಗಳು ಮತ್ತು ಎಳೆಯ ಕಾಯಿಗಳ ಮೇಲೆ ಗಂಡು ಹೆಣ್ಣು ಸೇರಿದ  ನಂತರ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಹುಳುಗಳಾಗಿ ಹೊರಬರುತ್ತವೆ. ಹುಳುಗಳು ಖಚಿತವಾಗಿ ಫಲವತ್ತಾದ (ಫರ್ಟಿಲೈಸ್ಡ್) ಮೊಟ್ಟೆಗಳಿಂದ  ಮಾತ್ರ ಹೊರಬರಲು ಸಾಧ್ಯವಿರುತ್ತದೆ.

ಹಣ್ಣು ನೊಣಗಳ ಕೋಶಾವಸ್ಥೆಯಿಂದ ನೊಣಗಳಾಗಿ ಹೊರಹುಮ್ಮಿದ ನಂತರ, ನೊಣಗಳ ಮೊಟ್ಟೆಗಳು ಫಲವತ್ತಾಗಿ ಮರಿ ಮಾಡಲು, ಸರಿಯಾದ ಸಮಯಕ್ಕೆ ಗಂಡು ಮತ್ತು ಹೆಣ್ಣು ಎರಡೂ ನೊಣಗಳು ಸರಿಯಾದ ಸಂಭೋಗ ಕ್ರಿಯೆ ಆಗಬೇಕಾಗಿರುತ್ತದೆ.  ಗಂಡು ನೊಣಗಳು  ಹೆಣ್ಣು ನೊಣಗಳು ಸಂಭೋಗಕ್ಕೆಂದೇ ಸ್ರವಿಸುವ ಪರಿಮಳಕ್ಕೆ ಆಕರ್ಷಿತವಾಗುತ್ತವೆ. ವಿಶೇಷ ಏನು ಅಂದರೆ ನೊಣಗಳು ಹೊರಬಂದ ನಂತರ ಕೆಲುವು ಗಂಟೆಗಳ ಮಾತ್ರ ಬದುಕಿರುತ್ತವೆ.  ಈ ಕೆಲ ಸಮಯದಲ್ಲಿ ಗಂಡು ಹೆಣ್ಣು ಸಂಭೋಗ ಕ್ರಿಯೆ ಯಾಗಿ ಮೊಟ್ಟೆ ಇಟ್ಟು ಸಾಯುತ್ತವೆ. ಹೆಣ್ಣು ನೊಣಗಳು ಆ ಸಮಕ್ಕೆ ಸಂಭೋಗ ವಾಗದೆ ಇದ್ದರೂ ಮೋತೀ ಇಡುತ್ತವೆ, ಆದರೆ ಅವು ಫಲವಾಗದೆ ಮರಿ ಯಾಗದ ಮೊಟ್ಟೆಗಳಾಗುತ್ತವೆ (ಫಾರ್ಮ್ ಕೋಳಿ ಮೊಟ್ಟೆ ತರ).

ಈ ಅಲ್ಪ ಸಮಯ ಅಂದರೆ ಸಂಭೋಗ ಕ್ರಿಯೆಯಲ್ಲಿ ಅಡ್ಡಿ ಉಂಟಾದರೆ ಫಲವತ್ತಾದ ಮೊಟ್ಟೆಗಳು ತಯಾರಾಗುವುದಿಲ್ಲ.

 ಹಣ್ಣು ನೊಣಗಳ ಈ ನಡವಳಿಕೆ/ ಗುಣಲಕ್ಷಣದ ಲಾಭವನ್ನು ಆಧರಿಸಿ ಪ್ಯಾರಾ ಫೆರೋಮೋನ್ ಟ್ರ್ಯಾಪ್  (ಲೈಂಗಿಕ ಆಕರ್ಷಣೆ) ಬಲೆಗಳನ್ನು ಬಳಸಿ ಹಣ್ಣು ನೊಣಗಳ ಹಾವಳಿಯನ್ನು ತಪ್ಪಿಸಬಹುದು.

 ಪ್ಯಾರಾ ಫೆರೋಮೋನ್ (ಲೈಂಗಿಕ ಆಕರ್ಷಣೆ) ಬಲೆಗಳಲ್ಲಿ ಹೆಣ್ಣು ಪರಿಮಳವನ್ನು ಅನುಕರಿಸುವ ದ್ರಾವಣವನ್ನು ಬಳಸುತ್ತಾರೆ. ಬಲೆಯು  ನೊಣಗಳು ತಪ್ಪಿಸಿಕೊಳ್ಳಲಾಗದೆ ಇರುವುದಕ್ಕೆ ಮತ್ತು ಸಾಯಲು ವ್ಯವಸ್ಥಿತವಾಗಿರುತ್ತದೆ.  ಪ್ಯಾರಾ ಫೆರೋಮೋನ್ (ಲೈಂಗಿಕ ಆಕರ್ಷಣೆ) ಬಲೆಗಳನ್ನು ಕಲ್ಲಂಗಡಿ ತೋಟದಲ್ಲಿ ಕಟ್ಟಿದರೆ, ಗಂಡು  ನೊಣಗಳು ಸಂಭೋಗಿಸಲು ತಯಾರಿದ್ದು ಕಟ್ಟಿದ ಸ್ಥಳದಲ್ಲಿ ಹೆಣ್ಣು ನೊಣಗಳಿವೆ ಎಂದು ಭಾವಿಸಿ ಬಲೆಗಳಿಗೆ ಆಕರ್ಷಿತವಾಗಿ ಅಲ್ಲಿ ಬರುತ್ತವೆ, ಅಲ್ಲಿ ಕೀಟನಾಶಕದಲ್ಲಿ ಬಿದ್ದು ಸಾಯುತ್ತವೆ.  

ಹೆಣ್ಣು ನೊಣಗಳು ಹೂವು/ಕಾಯಿಗಳ ಮೇಲೆ ಮೊಟ್ಟೆಯಿಡಲು ಕಡಿಮೆ ಸಮಯವಿರುವುದರಿಂದ ಹೊರಹುಮ್ಮಿದ ನಂತರ, ಅವು ಎಲ್ಲೇ ಇದ್ದರೂ ಕಲ್ಲಂಗಡಿ ತೋಟಗಳ ಕಡೆ ಹಾರುತ್ತವೆ. ಗಂಡು ನೊಣದೊಂದಿಗೆ ಸೇರಿ ಮೊಟ್ಟೆ ಇಡಬಹುದು ಎಂದು ಬರುತ್ತವೆ ಆದರೆ ಗಂಡು ನೊಣಗಳು ಆಕರ್ಷಕ ಬಲೆಗಳಿಗೆ ಆಕರ್ಷಿತವಾಗಿ ಸತ್ತಾಗ ಹೆಣ್ಣು ನೊಣಗಳಿಗೆ ಸೇರಲು ಗಂಡು ನೊಣಗಳು ಇಲ್ಲದ್ದಿದ್ದಾಗ ಗಂಡು ಹೆಣ್ಣು ಸೇರದೆ ಟೊಳ್ಳು ಮೊಟ್ಟೆಗಳನ್ನು ಇಡುತ್ತವೆ. ಟೊಳ್ಳು ಮೊಟ್ಟೆಗಳನ್ನು ಹಣ್ಣು ನೊಣಗಳು ಇಟ್ಟರೂ ಮರಿಗಳಾಗದೆ ಕಾಯಿಗಳನ್ನು ಸೇರಿ ನಾಶ ಮಾಡುವ ಅವಕಾಶಗಳು ಕಡಿಮೆ ಇರುತ್ತವೆ.

  1. ರಾಸಾಯನಿಕ (ಕೀಟನಾಶಕಗಲಿಂದ) ನಿಯಂತ್ರಣ 

ಕಲ್ಲಂಗಡಿ ಬೆಳೆಯ ಮೇಲೆ ಹಣ್ಣು ನೊಣಗಳ ಹುಳುಗಳ ಹಾವಳಿ ತಪ್ಪಿಸಲು, ಕೊಲ್ಲಲು ಕೆಲವು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ನೊಣಗಳು ಇಟ್ಟಿರುವ ಮೊಟ್ಟೆಗೆಳನ್ನು ಕೊಲ್ಲ ಬಹುದಾದ ಗುಣಲಕ್ಷಣಗಲಿರುವ ಕೀಟನಾಶಕಗಳನ್ನೂ ರಾಸಾಯನಿಕ ಕೀಟನಾಶಕದ ದ್ರಾವಣದಲ್ಲಿ ಬೆರೆಸಬಹುದು 

1.ಕರಾಟೆ - 2 ಮಿಲಿ + ಬೇವಿನ ಎಣ್ಣೆ (ಎಕೊನೀಮ್ 10000 ಪಿ ಪಿ ಎಂ) 1 ಮಿಲಿ ಪ್ರತಿ ಲೀಟರ್ ನೀರಿಗೆ 

2.ಕೊರಜೆನ್ - 0.33 ಮಿಲಿ ಅಥವಾ ಅಂಪ್ಲಿಗೋ 0.4 ಮಿಲಿ  ಅಥವಾ ಬೆಲ್ಟ್ ಎಕ್ಸ್ಪರ್ಟ್ 0.5 ಮಿಲಿ ಅಥವಾ ಫೇಮ್ 0. 25 ಮಿಲಿ  + ಬೇವಿನ ಎಣ್ಣೆ 1 ಮಿಲಿ/ಲೀಟರ್
ಎಲೆಗಳ ಎರಡೂ ಬದಿಗಳಲ್ಲಿ ಮತ್ತು ಹಣ್ಣುಗಳ ಮೇಲೆ ಸಿಂಪಡಿಸಿ.

                      ಅಥವಾ

5.ಜೈವಿಕ ನಿಯಂತ್ರಣ

1. ಯು ಎ ಲ್ XYMO BUGTROL 1.5 ಮಿಲಿ/ಲೀಟರ್ ಎಲೆಗಳ ಎರಡೂ ಬದಿಗಳಲ್ಲಿ ಸಿಂಪಡಿಸಿ

2.ಪೆಸ್ಟೋ ರೇಜ್ (ಕೀಟನಾಶಕ) ಎಲೆಗಳ ಎರಡೂ ಬದಿಗಳಲ್ಲಿ 1 ಮಿಲಿ/ಲೀಟರ್ ಸಿಂಪಡಿಸಿ

Also Read : MANAGEMENT OF INSECT PESTS OF CARROT

Also Read : వరి పంటలో కాండం తొలుచు పురుగు(తెల్లకంకి )నివారణ

Created By:  

Kavyashree C. N

SME

For more information kindly WhatsApp on 8050797979 or give missed call on 180030002434 during office hours 10 AM to 5 PM.

--------------------------------------------------------------------------------------------------------

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this