ಟೊಮ್ಯಾಟೊ ಹಾಗೂ ಆಲೂಗಡ್ಡೆ ಬೆಳೆಗಳಲ್ಲಿ ಬರುವ ಮಾರಕ ಅಂಗಮಾರಿ (ಲೇಟ್ ಬ್ಲೈಟ್) ರೋಗದ ಹತೋಟಿ ಕ್ರಮಗಳನ್ನು ಅನುಸರಿಸಿ!

    Tomato and potato

ಟೊಮ್ಯಾಟೊ ಬೆಳೆ ನಮ್ಮ ದೇಶದ ರೈತರು ವರ್ಷ ಪೂರ್ತಿ ಬೆಳೆಯುತ್ತಿದ್ದಾರೆ ಮತ್ತು ಆಲೂಗಡ್ಡೆ ಚಳಿಗಾಲದ ಬೆಳೆ. ಹೆಚ್ಛಾದ ಮಳೆ ಮತ್ತು ಕಡಿಮೆ ಉಷ್ಣಾಂಶವಿದ್ದಾಗ ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಗಳಿಗೆ ಹಲವು ರೋಗಗಳು ಬಾಧೆ ಮಾಡುತ್ತವೆ. ಈ ವಾತಾವರಣದಲ್ಲಿ ಮುಖ್ಯವಾಗಿ ಅಂಗಮಾರಿ ರೋಗವು ಟೊಮ್ಯಾಟೊ ಹಾಗೂ ಆಲೂಗಡ್ಡೆ ಎರಡೂ ಬೆಳೆಗಳಲ್ಲಿ ಕಾಣಬಹುದು. 

   Late blight

ಮಾರಕ ರೋಗವಾಗಿ ಪರಿಣಮಿಸಿರುವ ಅಂಗಮಾರಿ ರೋಗವು ಫೈಟೋಪ್ತೆರಾ ಇನ್ಫೆಸ್ಟಾನ್ಸ್ (Phytopthora infestans) ಶಿಲೀಂಧ್ರದಿಂದ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ  ಈ ರೋಗವನ್ನು ಹತೋಟಿಯಲ್ಲಿಡದಿದ್ದರೆ ಇದರಿಂದ ಸುಮಾರು 80% ರಷ್ಟು ಬೆಳೆ ನಷ್ಟಮಾಡಬಲ್ಲದು. 

 

   Late blight in tomato crop

 

ಪ್ರಮುಖ ರೋಗ ಲಕ್ಷಣಗಳು:

ಟೊಮ್ಯಾಟೊ ಬೆಳೆಯಲ್ಲಿ ಅಂಗಮಾರಿ ರೋಗದ ಭಾದೆ ಇದ್ದಾಗ ಲಕ್ಷಣಗಳು ಎಲೆಗಳ ಮೇಲೆ, ಕೊಂಬೆಗಳ ಮೇಲೆ ಹಾಗೂ ಕಾಯಿಗಳ ಮೇಲೆಯೂ ಖಚಿತವಾಗಿ ಕಾಣುತ್ತವೆ. ರೋಗದ ಸಾಂದ್ರತೆಗೆ ಅನುಗುಣವಾಗಿ ಲಕ್ಷಣಗಳು ಸಸಿಯ ಭಾಗಗಳ ಮೇಲೆ ಸ್ಪಷ್ಟತೆ ಕಾಣುತ್ತದೆ. ಟೊಮ್ಯಾಟೊ ಕಾಯಿಗಳಲ್ಲಿ ರೋಗದ ದಾಳಿ ಕಂಡು ಬರುವ ಲಕ್ಷಣವೆಂದರೆ, ಕಾಯಿಗಳು ಉದುರುವುದು. ಕಾಯಿಗಳ ಮೇಲೆ ಅಥವಾ ಕಾಯಿಗಳ ತೊಟ್ಟುಗಳ ಮೇಲೆ ಮಚ್ಚೆ, ಚುಕ್ಕೆ ಹಾಗೂ ಕೊಳೆತ, ಈ ಲಕ್ಷಣಗಳೇ ಕಾಣದೆ, ಹಸಿ ಕಾಯಿಗಳು ಉದುರುವುದು ಮಾತ್ರ ಕಾಣುತ್ತದೆ. ಒಮ್ಮೊಮ್ಮೆ ಕಾಯಿಗಳು ಯಥೇಚ್ಛವಾಗಿ ಉದುರುವವರೆಗೂ ಅದು ಅಂಗಮಾರಿ ರೋಗವೆಂದು ನಿರ್ಧರಿಸುವುದು ಕಷ್ಟವಾಗುತ್ತದೆ.

   Late blight

 

ಹತೋಟಿ ಕ್ರಮಗಳು:

ರೋಗಮುಕ್ತ, ಆರೋಗ್ಯಕರ ಬೀಜದ ಆಯ್ಕೆ, ಒಂದು ಗಿಡದಿಂದ  ಗಿಡಕ್ಕೆ , ಸಾಲಿನಿಂದ ಸಾಲಿಗೆ ನಡುವೆ ಹೆಚ್ಚು ಅಂತರ ನೀಡುವುದು, ಬೆಳೆಗೆ  ಸಮತೋಲಿತ ಪೋಷಕಾಂಶಗಳ ನೀಡುವುದು  ಮತ್ತು ಬೀಜ ನಾಟಿ ಮಾಡುವುದರಿಂದಲೇ ಸರಿಯಾದ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರಿಂದ ರೋಗಮುಕ್ತ ಬೆಳೆಯನ್ನು ಬೆಳೆಯಲು ಸಹಾಯ ಮಾಡುತ್ತದೆ. 

 

   Seed materials

 

ಅಂಗಮಾರಿ ರೋಗದ ಹರಡುವಿಕೆ  ಸಾಮನ್ಯವಾಗಿ ಗಾಳಿಯಿಂದ ಮತ್ತೆ ಈ ರೋಗದ ವೃದ್ಧಿ ಹಾಗೂ ಬೆಳೆವಣಿಗೆಗೆ ಪೂರಕವಾದ ವಾತಾವರಣ ಇದ್ದಲ್ಲಿ [ಶೀತದಿಂದ ಕೂಡಿದ ಹೆಚ್ಚು ತೇವಾಂಶ] ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಬೆಳೆಯನ್ನು ಆಕ್ರಮಣ ಮಾಡಬಲ್ಲದು. 

 

   Rain water + Late blight

 

ಅಂಗಮಾರಿಯ ತೀವ್ರತೆಗೆ ಅನುಗುಣವಾಗಿ ಈ ಕೆಳಗೆ ನೀಡಿರುವ ಶಿಲೀಂಧ್ರ ನಾಶಕಗಳ ಸಿಂಪಡಣೆ ಮಾಡಿದರೆ  ಈ ರೋಗವನ್ನು ಹತೋಟಿಯಲ್ಲಿಡಬಹುದು.

 

 1. ಬೆಳೆಯಲ್ಲಿ ರೋಗದ ನಿರೋಧಕತೆಯನ್ನು ವೃದ್ಧಿ ಮಾಡಿ ರೋಗದ ದಾಳಿಯನ್ನು ತಡೆಯಲು ಸಿಂಪರಣೆ ಮಾಡಬಹುದಾದ ಅಂತವ್ರ್ಯಾಪಿ ಶಿಲೀಂಧ್ರನಾಶಕಗಳು

  ಮೆಟಾಲಾಕ್ಸಿಲ್ 35 % [ಕ್ರಿಲಾಕ್ಸಿಲ್, ಕ್ರಿಲಾಕ್ಸಿಲ್ ಪವರ್, ರಿಡೋಮೆಟ್] - 0.5 gm ರಿಂದ 1 gm ಪ್ರತೀ ಲೀ. ನೀರಿನಲ್ಲಿ ಮಿಶ್ರಣ ಮಾಡಿ ಬೆಳೆಯ ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು.

 

 Late blight control at early disease invasions stage

2. ರೋಗದ ಹಾವಳಿಯಾಗಿ ಆರಂಭಿಕ ಹಂತದಲ್ಲಿ ಸಿಂಪರಣೆ ಮಾಡಬಹುದಾದ ಸಾಂಪರ್ಕಿಕ ಶಿಲೀಂಧ್ರನಾಶಕಗಳು

ಮ್ಯಾಂಕೋಜೆಬ್ [ಇಂಡೊಫಿಲ್ ಎಂ -45, ಡೈತೇನ್ ಎಂ -45 ಇತ್ಯಾದಿ] ಅಥವಾ ಕ್ಲೋರೋಥಲೋನಿಲ್ [ಇಶಾನ್, ಕವಚ್, ಜಟಾಯು] ಅಥವಾ ಕಾಪರ್ ಆಕ್ಸಿ ಕ್ಲೋರೈಡ್ [ಬ್ಲಿಟಾಕ್ಸ್, ಬ್ಲೂ ಕಾಪರ್, ಬೊರೊಗೋಲ್ಡ್] ಅಥವಾ ಕಾಪರ್ ಹೈಡ್ರಾಕ್ಸೈಡ್ [ಕೊಸೈಡ್ 2 - 2.5 ಗ್ರಾಂ /ಲೀ  ಇವುಗಳಲ್ಲಿ ಯಾವುದಾದರೂ ಒಂದನ್ನುಜೊತೆಯಲ್ಲಿ ತಾಮ್ರ ಇಡಿಟಿಎ [ನೀಲ್ Cu] 0.5 ಗ್ರಾಂ /ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ರೋಗವನ್ನು ತಕ್ಷಣದಲ್ಲೆ ಹತೋಟಿಗೆ ತರಬಹುದು.

 

 Late blight control at early disease invasions stage Contact fungicides

 

3. ರೋಗದ ವೃದ್ಧಿ ಮತ್ತು ಬೆಳವಣಿಗೆ ಹಂತದಲ್ಲಿ ಪರಿಣಾಮಕಾರಿ ನಿಯಂತ್ರಣಕ್ಕೆ ಅಂತವ್ರ್ಯಾಪಿ ಶಿಲೀಂಧ್ರನಾಶಕ + ಸಾಂಪರ್ಕಿಕ ಶಿಲೀಂಧ್ರನಾಶಕ ಜೊತೆಯಾಗಿ ಮಿಶ್ರಣ ಮಾಡಿ ಸಿಂಪರಣೆ ಮಾಡಬಹುದು 

 

        Late blight control at early disease invasions stage systemic and contact fungicides1

                   Late blight control at early disease invasions stage systemic and contact fungicides2

 

4. ರೋಗದ ತೀವ್ರತೆ ಹೆಚ್ಚಿದ್ದಾಗ, ಅಂತವ್ರ್ಯಾಪಿ + ಸಾಂಪರ್ಕಿಕ ಎರಡೂ ಗುಣಗಳನ್ನೂ ಹೊಂದಿರುವ ನ ಶಿಲೀಂಧ್ರನಾಶಕಗಳನ್ನು ಸಿಂಪರಣೆ ಮಾಡುವುದರಿಂದ ರೋಗವನ್ನು ತ್ವರಿತವಾಗಿ ಹತೋಟಿ ಮಾಡಬಹುದು

1. ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ [ರಿಡೋಮಿಲ್ ಗೋಲ್ಡ್, ಜು ರಿಡೋಮಿಲ್, ಮಾಸ್ಟರ್, ಕ್ರಿಲ್ಯಾಕ್ಸಿಲ್ 72] 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

 

  Combo products for late blight disease control 1

2. ಫಮೋಕ್ಸಡೋನ್ + ಸೈಮೋಕ್ಸನಿಲ್ [ಇಕ್ವಿಯೇಶನ್ ಪ್ರೊ] 200 ಮಿಲಿ ಪ್ರತಿ ಎಕರೆಗೆ 200 ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

3. ಸೈಮೋಕ್ಸನಿಲ್ 8% + ಮ್ಯಾಂಕೋಜೆಬ್ 64% [ಕರ್ಜೇಟ್] 3 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

            Combo products for late blight disease control 2

4. ಮೆಟಿರಾಮ್  44% + ಡೈಮೆಥೊಮಾರ್ಫ್ 9% [ಅಕ್ರೋಬ್ಯಾಟ್ ಕಂಪ್ಲೀಟ್] 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

5. ಅಮೆಟೊಕ್ಟ್ರಾಡಿನ್ 27% + ಡಿಮೆಥೊಮೊರ್ಫ್ [ಜಾಂಪ್ರೋ] 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

                        Combo products for late blight disease control 3

6. ಫ್ಲೂಪಿಕೊಲೈಡ್ 4.44% + ಫೋಸೆಟೈಲ್-ಅಲ್ [ಪ್ರೊಫೈಲರ್] – 3-4 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

7. ಇಪ್ರೊವಾಲಿಕಾರ್ಬ್ + ಪ್ರೊಪಿನೆಬ್ [ಮೆಲೋಡಿ ಡ್ಯುಯೋ] 3-4 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

8. ಫ್ಲೋಪಿಕೊಲೈಡ್ + ಪ್ರೊಪಮೊಕಾರ್ಬ್ ಹೈಡ್ರೋಕ್ಲೋರೈಡ್ [ಇನ್ಫಿನಿಟೊ] 2.5-3  ಮಿಲಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

               Combo products for late blight disease control 4

9. ಕ್ರೆಸೊಕ್ಸಿಮ್ - ಮೀಥೈಲ್ 15 % + ಕ್ಲೋರೊಥಲೋನಿಲ್ [ಸಾರ್ಥಕ್] 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

10. ಕ್ಲೋರೊಥಲೋನಿಲ್ + ಮೆಟಾಲಾಕ್ಸಿಲ್-ಎಂ [ಫೋಲಿಯೊ ಗೋಲ್ಡ್] 2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

                        Combo products for late blight disease control 5

 

5. ಜೈವಿಕ ಶಿಲೀಂಧ್ರನಾಶಕಗಳ ಬಳಕೆಯಿಂದ ಸಹ ಈ ರೋಗವನ್ನು ನಿಯಂತ್ರಿಸಬಹುದು. ಜೈವಿಕ ಶಿಲೀಂಧ್ರನಾಶಕಗಳು ರೋಗಕಾರಕ ರೋಗಕಗಳನ್ನು ತಿಂದು ನಾಶ ಮಾಡುವ ಮೂಲಕ ರೋಗವನ್ನು ನಿಯಂತ್ರಿಸುತ್ತವೆ

 

ಟ್ರೈಕೋಡರ್ಮಾ ವಿರಿಡೆ [ಎಕೋಡರ್ಮಾ, ನಿಸರ್ಗ, ಸಂಜೀವಿನಿ, ಚಿಕಿತ್ಸೆ, ಆಲ್ಡರ್ಮ್] 5 -10 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

   Biological agents to control late blight disease in potato and tomato1

ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ [ಅಲ್ಮೋನಾಸ್, ಇಕೊಮೊನಾಸ್, ಸ್ಪಾಟ್, ಬ್ಯಾಕ್ಟ್ವಿಪ್] 5-10 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

  Biological agents to control late blight disease in potato and tomato2

ಬ್ಯಾಸಿಲಸ್ ಸಬ್ಟಿಲಿಸ್, [ಮಿಲ್ಡೌನ್, ಅಬಾಸಿಲ್, ಮಲ್ಟಿಪ್ಲೆಕ್ಸ್ ಬಯೋಜೋಡಿ, ಮಿಲಸ್ಟಿನ್ -ಕೆ] 5-10 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ

   Biological agents to control late blight disease in potato and tomato 3

 

ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಗಳಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಅಂಗಮಾರಿ ರೋಗವನ್ನು ಹತೋಟಿ ಮಾಡಬೇಕಾದರೆ  ಉತ್ತಮ ಶಿಲೀಂಧ್ರನಾಶಗಳ ಆಯ್ಕೆ ಹಾಗೂ ಬಳಕೆಯಿಂದ ಮಾತ್ರ ಸಾಧ್ಯವಾಗುತ್ತದೆ.

                                                    **************

K SANJEEVA REDDY

LEAD Agronomist

ಹೆಚ್ಚಿನ ಮಾಹಿತಿಗಾಗಿ  8050797979 ಗೆ ಕರೆ ಮಾಡಿ [ಕಚೇರಿ ಸಮಯದಲ್ಲಿ 10 AM ರಿಂದ 5 PM] ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ 

___________________________________________________

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

This site is protected by hCaptcha and the hCaptcha Privacy Policy and Terms of Service apply.


Explore more

Share this