ಟೊಮ್ಯಾಟೊ ಬೆಳೆಯ ಆಕ್ರಮಣಕಾರಿ ಕೀಟ - ಊಜಿ ಹುಳುವಿನ ಹತೋಟಿಗೆ ಪರಿಣಾಮಕಾರಿ ಉಪಾಯಗಳು

ನಮ್ಮ ನಾಡಿನ ಟೊಮ್ಯಾಟೊ ಬೆಳೆಗಾರರಿಗೆ ಊಜಿ ಕಾಟ ಸಿಂಹ ಸ್ವಪ್ನ ವಾಗಿಬಿಟ್ಟಿದೆ. ಈ ಕೀಟದ ದಾಳಿಯನ್ನು ತಪ್ಪಿಸಿ ಒಳ್ಳೆ ಬೆಳೆ ಮಾಡಿ ಅಧಿಕ ಇಳುವರಿ ತೆಗುಯುವುದು ರೈತರಿಗೆ ಕಠಿಣ ಸವಾಲಾಗಿ ಬಿಟ್ಟಿದೆ. ಕೀಟನಾಶಕಗಳನ್ನು ಬಳಸಿ ನಿಯಂತ್ರಣ ಮಾಡಲು, ಇನ್ನು ಕೀಟನಾಶಕಗಳೇ ಇಲ್ಲವೇನೋ ಅನ್ನುವ ಹಾಗೆ, ಎಲ್ಲಾ ರೀತಿಯ ಕೀಟನಾಶಕಗಳನ್ನೂ ಉಪಯೋಗಿಸಿ ನಿರಾಶರಾಗಿದ್ದಾರೆ.

   

ನಮ್ಮ ರೈತರು ತಮ್ಮ ಬೆಳೆಗಳಲ್ಲಿ ಕೀಟಗಳ ಮತ್ತು ರೋಗಗಳ ನಿಯಂತ್ರಣಕ್ಕೆ ರಾಸಾಯನಿಕ ಔಷಧಿಗಳ ಮೇಲೆ ಎಷ್ಟು ಅವಲಂಭಿತ ಆಗಿದ್ದಾರೆ ಎಂದು ನೋಡುವುದಾದರೆ, ಸಾವಯವ /ಪ್ರಾಕೃತಿಕ/ಸ್ವಾಭಾವಿಕ ರೋಗ/ಕೀಟ ನಿರ್ವಹಣೆ ಪದ್ದತಿಗಳ ಬಗ್ಗೆ ಎಷ್ಟು ಹೇಳಿದರೂ, ಯಾರೇ ಬಂದು ಹೇಳಿದರೂ ಅವರ ಕಿವಿಗೆ ಮಾತ್ರ ಸೀಮಿತವಾಗಿದೆ. ಭಗವಂತ ಬಂದು ಹೇಳಿದರೂ ಭಗವಂತನಿಗೆ ಒಂದು ಸುಮ್ಮನೆ ಚಿರು ನಗೆ ನೀಡಿ ಸಂತೋಷ ಪಡಿಸುತ್ತಾರೆ.

ನಮ್ಮ ರೈತರು ವಿದ್ಯಾಲಯಗಳ ವಿಜ್ಞಾನಿಗಳು, ಕೃಷಿ ಪಂಡಿತರು, ಉನ್ನತ ಕೃಷಿ ವಿಜ್ಞಾನಿಗಳ ಮಾತು ಮತ್ತು ಶಿಫಾರಸ್ಸುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ, ಕೇಳುವುದೂ ಇಲ್ಲ, ಪಾಲಿಸುವುದಂತೂ ಕನಸೇ ಸರಿ.

 ನಮ್ಮ ಕೃಷಿ ಹೀಗಿರುವಾಗ, ಕೆಲುವು ರೈತರು ಟೊಮ್ಯಾಟೊ ಬೆಳೆಗೆ ಪರಮ ಶತ್ರು ಊಜಿ ಕೀಟದ ಹತೋಟಿಗೆ ಹಲವು ಪ್ರಯೋಗಗಳನ್ನು ಮಾಡಿ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ಹೊಸ ತಂತ್ರಜ್ಞಾನ ಏನು ಇಲ್ಲ.

ಕೆಲವು ಹೇಳುವುದಾದರೆ

  • ಸಮತೋಲನ ಪೋಷಕಾಂಶಗಳ ನಿರ್ವಹಣೆ
  • ತಳಿಗೆ ತಕ್ಕ ಸೂಕ್ತ ಸಸ್ಯಗಳ ನಡುವೆ ಅಂತರ
  • ಫಲವತ್ತಾದ ಮಣ್ಣಿಗೆ ಸಾಕಷ್ಟು ಇಂಗಾಲ ಕೊಡುವುದು
  • ಮಣ್ಣಿನಲ್ಲಿ ಮಿತ್ರ ಜೀವಿಗಳ ಪೋಷಣೆ
  • ಅವಶ್ಯಕತೆಯಂತೆ ಬೆಳೆಗೆ ನೀರುಣಿಸುವಿಕೆ
  • ಪ್ರತಿಬಂಧಕ ಕೀಟ/ರೋಗ ನಿರ್ವಹಣಾ ಕ್ರಮಗಳ ಪಾಲನೆ
  • ಕೀಟನಾಶಕಗಳ ಸದ್ಬಳಕೆ

ಇವುಗಳಿಗಿಂತ ಮೇಲಾಗಿ/ ಜೊತೆಗೆ ಕೆಲುವು ರೈತರು ಊಜಿ ಕೀಟದ ಹಾವಳಿಯನ್ನು ಬೆಳೆಯ ಶುರುವಿನಿಂದಲೇ ನಿಗಾ ಇಟ್ಟು, ಹತೋಟಿ ಕ್ರಮಗಳನ್ನು ಪಾಲಿಸಿ ಕೀಟದ ಪರಿಣಾಮಕಾರಿ ನಿಯಂತ್ರಣವನ್ನು ಮಾಡುತ್ತಿದ್ದಾರೆ.

ಊಜಿ ಕೀಟದ ಹತೋಟಿಗೆ ಪ್ರತಿಬಂಧಕ ಉಪಾಯಗಳಲ್ಲಿ ಕೀಟದ ಹಂತಗಳನ್ನೂ ಗಮನದಲ್ಲಿಟ್ಟುಕೊಂಡು ಕೀಟ ನಿರ್ವಹಣೆ ಯೋಜನೆ ಮಾಡಬೇಕಾಗುತ್ತದೆ.

    TUTA absoluta larve and pupa

ನಮ್ಮ ರೈತರು ಊಜಿ ನೊಣದ ಹತೋಟಿಗೆ ಕೆಲುವು/ಹಲವು ರಾಸಾಯನಿಕ /ಸಾವಯವ ಕೀಟನಾಶಕಗಳ ಬಳಕೆ ಮಾಡುತ್ತಿದ್ದಾರೆ.

ಪ್ರತಿ ಸಲವೂ ಒಂದೇ ತರಹದ ಕೀಟನಾಶಕಗಳನ್ನು ಬಳಸದೆ ಬೇರೆ ಬೇರೆ ತರಹದ ಕೀಟನಾಶಕಗಳನ್ನು ಸಿಂಪಡಣೆ ಮಾಡುಬೇಕಾಗುತ್ತದೆ. ಕೆಳಗೆ ನೀಡಿರುವ ಪ್ರತ್ಯೇಕ ಕೀಟನಾಶಕಗಳನ್ನು ಪ್ರತಿ ಏಳು ದಿನಕ್ಕೊಮ್ಮೆ ಬಳಸ ಬಹುದು ಎಂದು ರೈತರು ಹೇಳುತ್ತಾರೆ.

ಊಜಿ ಹುಳುವಿನ ಹತೋಟಿಗೆ ಪರಿಣಾಮಕಾರಿ ಕೀಟನಾಶಕಗಳಲ್ಲಿ ರೈತರು ಈಗಾಗಲೇ  ಬಳಸುತ್ತಲಿರುವ ಕೆಲವು ಕೆಳಗೆ ಸೂಚಿಸಲಾಗಿದೆ

  • ಕ್ಲೋರಾಂಟ್ರನಿಲಿಪ್ರೋಲ್( ಕೊರಾಜಿನ್ -  0.33 ಮಿಲಿ / ಲಿ ನೀರಿಗೆ   / ಅಂಪ್ಲಿಗೋ 0.4 ಮಿಲಿ / ಲಿ ನೀರಿಗೆ  /  ಧನುಕ ಕವರ್  0.33 ಮಿಲಿ / ಲಿ ನೀರಿಗೆ / -- ವೋಲಿಯಂ ಫ್ಲೆಕ್ಸಿ - ಡ್ರಿಪ್ನಲ್ಲಿ - 250  ಮಿಲಿ/ಎಕರೆಗೆ )
  •  ಇಮಾಮೆಕ್ಟಿನ್ ಬೆಂಝೋಏಟ್  0.5 ( ಫೊಕ್ಲೆಯ್ಮ್/ ಸ್ಟಾರ್ಕಲೈಮ್ / ಇ . ಎಂ. / ರಿಲ್ ಆನ್ )
  • ಸ್ಪಿನೋಟೊರಾಂ 0.9 ಮಿಲಿ / ಲಿ ನೀರಿಗೆ      (ಲಾರ್ಗೋ/ ದೆಲಿಗೇಟ್ - )
  • ಸ್ಪಿನೊಸೈನ್ - 0.375 ಮಿಲಿ / ಲಿ ನೀರಿಗೆ  (ಟ್ರೇಸರ್)
  • ಫ್ಲ್ಯೂಬೆಂಡಾಮೈಡ್ - ( ಫೇಮ್ 0.25 ಮಿಲಿ / ಲಿ ನೀರಿಗೆ  / ಬೆಲ್ಟ್ ಎಕ್ಸ್ಪರ್ಟ್ 0.5 ಮಿಲಿ / ಲಿ ನೀರಿಗೆ  / ಫ್ಲ್ಯೂಟೋನ್ 1 ಮಿಲಿ / ಲಿ ನೀರಿಗೆ)

    Chemical insecticides to kill TUTA ABSOLUTA

ಮೇಲೆ ಸೂಚಿಸಿರುವ ಕೀಟನಾಶಕಗಳಲ್ಲದೆ ಕೆಲುವು ಜೈವಿಕ ಕೀಟನಾಶಕಗಳನ್ನು ರೈತರು ಬಳಕೆ ಮಾಡಿ ಟ್ಯೂಟ ಉಜಿಹುಳುವನ್ನು ಹತೋಟಿಮಾಡುತ್ತಿದ್ದರೆ  ಹಲವು ರೈತರು.

ಜೈವಿಕ ಕೀಟನಾಶಕಗಳಲ್ಲಿ ಬಗೆಬಗೆಯ ಪರಭಕ್ಷಕಗಳು (Predators), ಪರಾವಲಂಬಿಗಳು(parasites) ಮತ್ತು ಎಂಟೊಮೊಪಾಥೋಜೆನಿಕ್ (Entamopathogenic) ಸೂಕ್ಷ್ಮಜೀವಿಗಳನ್ನು ಬಳಕೆ ಮಾಡಿರುತ್ತವೆ.

ಜೈವಿಕ ಕೀಟನಾಶಕಗಳಾಗಿ ಬಳಸಬಹುದಾದ ಜೀವಿಗಳಲ್ಲಿ ಮೆಟರ್ಹಿಜಿಯಂ ಅನಿಸೋಫಿಲೆ  (ಶಿಲೀಂಧ್ರ ) ಮತ್ತು ಬಾಸಿಲ್ಲಸ್ ಥುರೆಂಜಿಎನ್ಸಿಸ್(ಬ್ಯಾಕ್ಟೀರಿಯಾ) ಜೀವಿಗಳನ್ನು ರೈತರು ಈ ಊಜಿ ಕೀಟದ ಮೇಲೆ ಬಳಸಿ ನಿವಾರಣೆ ಮಾಡಿರುತ್ತಾರೆ  ಹಾಗೂ ನಿವಾರಣೆ ಮಾಡಬಹುದು ಎಂದು ವೈಜ್ಞಾನಿಕ ಪುರಾವೆಗಳೂ ಲಭ್ಯವಿವೆ.

ಜೈವಿಕ ಕೀಟನಾಶಕಗಳಲ್ಲಿ ಯಾವುದು ಬಳಸಬಹುದು ಕೆಳಗೆ ವಿವರಣೆ ನೋಡಿ! 

ಮೆಟರ್ಹಿಜಿಯಂ ಅನಿಸೋಫಿಲೆ  ಜೈವಿಕ ಕೀಟನಾಶಕವನ್ನು ಬೆಳೆಯ ಮೊದಲನೇ ಹಂತದಿಂದ ಪ್ರತಿ ವಾರಕ್ಕೆ ಒಮ್ಮೆಯಂತೆ ಸಿಂಪಡಣೆ ಮಾಡಿ ಊಜಿ ಕೀಟದ ಹತೋಟಿ ಮಾಡಬಹುದು. ಹೀಗೆ ಮಾಡುವುದರಿಂದ, ಕೀಟನಾಶಕಗಳ ವಿರುದ್ಧ  ಊಜಿ ಕೀಟದ ನಿರೋಧಕತೆಯನ್ನು ತಡೆಯಬಹುದು. ಮೆಟರ್ಹಿಜಿಯಂ ಅನಿಸೋಫಿಲೆ ಒಂದು ಶಿಲಿಂದ್ರ ಆಗಿರುವುದರಿಂದ ಅದು ಊಜಿ ಕೀಟದ ಎಲ್ಲ ಹಂತಗಳನ್ನೂ ನಾಶ ಮಾಡುವ ಸಾಮರ್ಥ್ಯವಿದೆಯೆಂದು ವಿಜ್ಞಾನಿಗಳು ಹೇಳಿದ್ದಾರೆ.

     Metarhzium anisoplea for TUTA control

ಪ್ರೊ ಬಯೋ ರವರ ಬಯೋ ಮೆಟಾಜ್ ಅಥವಾ ಅಮೃತ್ ರವರ ಅಲ್ಮಿಡ್  ಅಥವಾ  ಉತ್ಕರ್ಷ್ ಟರ್ಮಿನಿಲ್  ಅಥವಾ  ಸನ್ ಬಯೋ ರವರ ಮೆಟಾ 2-3  ಮಿಲಿ / ಲಿ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು

ಹಾಗೆಯೇ ಟ್ಯೂಟ ಊಜಿ ಕೀಟದ ಸಾವಯವ ಅಥವಾ ಜೈವಿಕ ಹತೋಟಿಗೆ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಎಂಬ ದುಂಡಾಣು (ಬ್ಯಾಕ್ಟೀರಿಯಾ) ವನ್ನು ಬಳಸಬಹುದು. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ದುಂಡಾಣು (ಬ್ಯಾಕ್ಟೀರಿಯಾ), ಯಾವುದೇ ಕೀಟದ ಹೊಟ್ಟೆ ಸೇರಿದಾಗ ಅಲ್ಲಿ ಒಂದು ತರಹದ ವಿಷಕಾರಿ ಸಸಾರ ಜನಕ (ಪ್ರೋಟೀನ್) ಅನ್ನು ತಯಾರು ಮಾಡುತ್ತದೆ. ಆ ವಿಷಕಾರಿ ಸಸಾರ ಜನಕ (ಪ್ರೋಟೀನ್) ಹೊಟ್ಟೆಯಲ್ಲಿನ ಕರಳನ್ನು ತೊಂದರೆ ಮಾಡಿ, ಕೀಟವನ್ನು ರೋಗಗ್ರಸ್ತ ಮಾಡುತ್ತದೆ. ಕ್ರಮೇಣ ಆ ಕೀಟವು ಸಾಯುತ್ತದೆ.
ಬ್ಯಾಸಿಲಸ್ ತುರಿಂಜಿಯೆನ್ಸಿಸ್  ದುಂಡಾಣು (ಬ್ಯಾಕ್ಟೀರಿಯಾ) ಇರುವ ಕೀಟನಾಶಕವನ್ನು ಟ್ಯೂಟ ಊಜಿ ಕೀಟದ ಪರಿಣಾಮಕಾರಿ ನಿಯಂತ್ರಣಕ್ಕೆ ಬಳಸಬಹುದಾಗಿದೆ. ಈಗಾಗಲೇ ರೈತರು, ಇದನ್ನು ನಿಯಂತ್ರಣಕ್ಕೆ ಉಪಯೋಗ ಮಾಡುತ್ತಿದ್ದಾರೆ. ವೈಜ್ಞಾನಿಕವಾಗಿ ಪ್ರಯೋಗಗಳೂ ಮಾಡಿ ಫಲಿತಾಂಶಗಳು ದೃಢವಾಗಿವೆ.

 

       BACILLUS THURIENGENESIS for TUTA control

 ಬ್ಯಾಸಿಲಸ್ ತುರಿಂಜಿಯೆನ್ಸಿಸ್   ಇರುವ ಕೀಟನಾಶಕ

ಮಾರ್ಗೋ ರವರ ಡೆಲ್ಫಿನ್ 1-2 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಉತ್ಕರ್ಷ್ ರವರ ಬಿಟಿ 2-3 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬಹುದು

 ಟ್ಯೂಟ ಉಜಿಯ ನಿಯಂತ್ರಣಕ್ಕೆ ಮೋಹಕ/ಆಕರ್ಷಕ ಬಲೆಗಳ ಬಳಕೆ 

  • ಊಜಿ ಕೀಟಗಳು ಕೋಶಾವಸ್ಥೆಯಿಂದ ರೂಪಾಂತರ ಗೊಂಡ ನಂತರ ಗಂಡು ಹೆಣ್ಣು ಸೇರಬೇಕು, ಸೇರುವ ಹೆಣ್ಣು ನೊಣ ಆಕರ್ಷಕ ದ್ರವ್ಯ ವನ್ನು ಬಿಡುಗಡೆ ಮಾಡಿ ಗಂಡು ನೊಣವನ್ನು ತನ್ನ ಬಳಿ ಆಕರ್ಷಿಸುತ್ತದೆ.
  • ಊಜಿ ನೊಣದ ಈ ನಡತೆಯನ್ನು ಗಮನದಲ್ಲಿರಿಸಿಕೊಂಡು ಕೃತಕ ಆಕರ್ಷಕಗಳನ್ನು [ಆಕರ್ಷಕ ಬಲೆ - ಫೆರೋಮೋನ್ ಬಲೆ- Pheromone traps] ಬಳಸಿ ಗಂಡು ಚಿಟ್ಟೆಗಳನ್ನು ಒಂದು ಕಡೆ ಆಕರ್ಷಿಸಿ ಹೆಣ್ಣು ಚಿಟ್ಟೆಯೊಂದಿಗೆ ಸೇರಲು ಅವಕಾಶಕೊಡದೆ ಕೊಲ್ಲುವ ವಿಧಾನವನ್ನು ಅಳವಡಿಸಬಹುದು.

       ಟ್ಯೂಟಾ ಅಬ್ಸೊಲ್ಯೂಟ ನೊಣದ ಆಕರ್ಷಕ ಬಲೆಗಳು   TRAPs for TUTA control

  • ಹೆಣ್ಣು ಚಿಟ್ಟೆಗೆ ಮೊಟ್ಟೆಯಿಡಲು ಕಡಿಮೆ ಸಮಯವಿರುವುದರಿಂದ ಗಂಡು ಚಿಟ್ಟೆಯೊಂದಿಗೆ  ಸಂಭೋಗ ವಿಲ್ಲದೆ ಮೊಟ್ಟೆ ಇಟ್ಟರೂ ಅವು  ಮರಿಯಾಗುವುದಿಲ್ಲ. ಆಗ ಉಜಿಯ ಹಾವಳಿ ಕಡಿಮೆ ಯಾಗುತ್ತದೆ.
  • ಮೊದಲೇ ಹೇಳಿದಂತೆ ಊಜಿ ಚಿಟ್ಟೆಗಳು ರಾತ್ರಿಯ ವೇಳೆ ಹೆಚ್ಚು ಸಕ್ರಿಯ ವಾಗಿರುವುದರಿಂದ, ಈ ಆಕರ್ಷಕ ಬಲೆಗಳನ್ನು ವಿದ್ಯುತ್ ದೀಪ [ಲೈಟ್ ಟ್ರ್ಯಾಪ್] ನ ಸಹಾಯವನ್ನು ಕೊಟ್ಟರೆ ಹೆಚ್ಚು ಪರಿಣಾಮಕಾರಿ.

                      ಟ್ಯೂಟಾ ಅಬ್ಸೊಲ್ಯೂಟ ನೊಣದ ಆಕರ್ಷಕ ಮತ್ತು ಬೆಳಕು ಬಲೆಗಳು

  • ಫೆರೋಮೋನ್ ಬಲೆಗಳ ಬಳಕೆಯು ಊಜಿ ಚಿಟ್ಟೆ ಇರುವಿಕೆಯನ್ನೂ ಕಂಡುಹಿಡಿಯಲು ಅನುಕೂಲವಾಗುತ್ತದೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ನಿರ್ಧರಿಸಲು ಸಹಾಯ ವಾಗುತ್ತದೆ. ಊಜಿ ಕೀಟ ದಾಳಿ ಮತ್ತು ಪ್ರಭಾವ ಗಂಭೀರವಾಗುವುದಕ್ಕಿಂತ ಮುಂಚಿತವಾಗಿ ನಿಯಂತ್ರಿಸಲು ರೈತರನ್ನು ಎಚ್ಚರಿಸುತ್ತದೆ.
  • ಇನ್ಕ್ಯಾಂಡೆಸೆಂಟ್ ಬಲ್ಬ್ @ ಒಂದು ಬಲ್ಬ್ / 150 ಚಮೀ + 1 ಆಕರ್ಷಕ ಬಲೆ - ಫೆರೋಮೋನ್ ಬಲೆ[Pheromone traps] / 300 ಚಮೀ.

ಟ್ಯೂಟ ಉಜಿಯ ನಿಯಂತ್ರಣಕ್ಕೆ ನೀಲಿ ಬಣ್ಣ ಅಂಟು ಕಾಗದ ಬಲೆಗಳ ಬಳಕೆ 

ಟ್ಯೂಟ ಉಜಿಯ ಕೀಟದ ಚಿಟ್ಟೆ ನೀಲಿ ಬಣ್ಣ ಬೆಳಕಿಗೆ ಆಕರ್ಷಿತವಾಗುತ್ತದೆ ಎಂದು ವಿಜ್ಞಾನ ಪುಸ್ತಕಗಳಲ್ಲಿ ನಮೂದಿಸಿದ್ದಾರೆ. ಈ ಲಕ್ಷಣದ ಉಪಯೋಗವನ್ನು ಬಳಸಿಕೊಂಡು, ಮೊಟ್ಟೆ ಇಡಲು ಬರುವ ಊಜಿ ಕೀಟದ ಚಿಟ್ಟೆಗಳನ್ನು ಆಕರ್ಷಿಸಿ ಕೊಲ್ಲಲು, ಅಂಟು ಲೇಪಿತ ನೀಲಿ ಕಾಗದಗಳನ್ನು ತೋಟದಲ್ಲಿ ನೇತು ಹಾಕುತ್ತಾರೆ.

        Bleu sticky traps to kill TUTA control

ಚಿಟ್ಟೆಗಳು ನೀಲಿ ಬಣ್ಣಕ್ಕೆ ಆಕರ್ಷಿತವಾಗಿ , ಅಂಟು ಕಾಗದಕ್ಕೆ ಅಂಟಿಕೊಂಡು, ಅಲ್ಲಿಂದ ಹರಲಾರದೆ ಸಾಯುತ್ತವೆ. ಅಂಟು ಕಾಗದ ಕಟ್ಟಿದ ತೋಟಗಳಲ್ಲಿ ಟ್ಯೂಟ ಉಜಿಯ ಚಿಟ್ಟೆಗಳು ಮೊಟ್ಟೆ ಇಡುವುದು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
ಟ್ಯೂಟ ಉಜಿಯ ಚಿಟ್ಟೆಗಳನ್ನು ಇನ್ನಷ್ಟು ಉತ್ತಮವಾಗಿ ಆಕರ್ಷಿಸಲು ಚಿಟ್ಟೆ ಮೋಹಕ ಪ್ರಚೋದಕಗಳನ್ನೂ ಲೇಪಿಸಿರುವ ಅಂಟು ಕಾಗದಗಳೂ ಸಿಗುತ್ತವೆ.

                                 Bleu sticky traps to kill TUTA control in tomato plot

ಟ್ಯೂಟ ಉಜಿಯ ಉತ್ತಮ ನಿಯಂತ್ರಣಕ್ಕೆ ಪ್ರತಿ ಎಕರೆಗೆ 10 ರಿಂದ 12 ನೀಲಿ ಬಣ್ಣದ  ಅಂಟು ಕಾಗದ ಬಲೆಗಳ ಬಳಕೆಮಾಡಬೇಕಾಗುತ್ತದೆ  

ಇದನ್ನೂ ಓದಿ : ಟೊಮ್ಯಾಟೊ ಬೆಳೆಯ ಪ್ರಾಣಾಂತಕ ಕೀಟ ಊಜಿ [ಟ್ಯೂಟಾ ಅಬ್ಸೊಲ್ಯೂಟ] ದ ಪರಿಣಾಮಕಾರಿ ಹತೋಟಿ

                    ^^^^^^^^^^^^^^^^^^

ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ  ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ.    8050797979 ಗೆ  ವಾಟ್ಸಾಪ್ ಕೂಡ ಮಾಡಬಹುದು 

                                 ***

K SANJEEVA REDDY,

LEAD Agronomist, BigHaat.

---------------------------------------------------------------------------                                       Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this