ಹತ್ತಿ ಬೆಳೆಯಲ್ಲಿ ಬಿಳಿನೊಣದ ಹಾವಳಿ ಮತ್ತು ನಿರ್ವಹಣೆ

ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ  ಹತ್ತಿ ಬೆಳೆಯೂ ಒಂದಾಗಿದೆ. ಹತ್ತಿ ಬೆಳೆ ಹಲವು ಕೀಟಗಳ ಹಾವಳಿಗೆ ಒಳಗಾಗುತ್ತದೆ .

                Cotton

ಜಿಗಿ ಹುಳು [ಜಾಸಿಡ್ಸ್], ಥ್ರಿಪ್ಸ್ ನುಸಿ, ಸಸ್ಯಹೇನು ಮತ್ತು ಬಿಳಿನೊಣಗಳು ರಸ ಹೀರುವ ಕೀಟಗಳು ಮತ್ತು ಕಾಯಿಕೊರಕ(ಅಮೆರಿಕನ್ ಮತ್ತು ಗುಲಾಬಿ ಬಣ್ಣ) ಮತ್ತು ಕತ್ತರಿ ಹುಳು [ಸ್ಪೊಡೋಪ್ಟೆರಾ] ಕೀಟಗಳು ಎಲೆಗಳ ಹಾಗೂ ಕಾಯಿಗಳ ಮೇಲೆ ಹಾವಳಿ ಮಾಡುತ್ತವೆ.

                  Sucking insects of cotton

ಹತ್ತಿ ಬೆಳೆಗೆ ಮಾರಣಾಂತಕ ಕೀಟಗಳಲ್ಲಿ ಬಿಳಿ ನೊಣ(ಬೆಮಿಸಿಯಾ ಟಬಾಸಿ)ವೂ ಒಂದಾಗಿದೆ. ಎರಡು ರೆಕ್ಕೆಯ ಬಿಳಿನೊಣದ ಮೈ ಮೇಲೆ ಬಿಳಿ ಮೇಣ ಮಾದರಿಯ ಪುಡಿ ಕಾಣುತ್ತದೆ. 

ಬಿಳಿನೊಣಗಳ ಮೊಟ್ಟೆಗಳು ಹಳದಿ ಮಿಶ್ರಿತ ಬಿಳಿ ಬಣ್ಣ ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ಬಿಳಿನೊಣಗಳು ಎಲೆಗಳ ಕೆಳಭಾಗದಲ್ಲಿ ಒಂಟಿಯಾಗಿ ಇಡುತ್ತವೆ. ಮರಿ ಹುಳು (ನಿಮ್ಫ್‌) ಗಳು ಹಳದಿ ಮತ್ತು ಕಂದು ಬಣ್ಣದಲ್ಲಿರುತ್ತವೆ, ಅವು ಹೆಚ್ಚು ಪ್ರಮಾಣದಲ್ಲಿ ಎಲೆಗಳ ಕೆಳಗೆ ಕಂಡುಬರುತ್ತವೆ. ಬಿಳಿನೊಣಗಳ ಕೋಶ (ಪ್ಯೂಪೆ)ಗಳು ಆಕಾರದಲ್ಲಿ ಮರಿ ಹುಳು (ನಿಮ್ಫ್‌)ಗಳನ್ನು ಹೋಲುತ್ತವೆ ಮತ್ತು ಕಂದುಬಣ್ಣದ್ದಾಗಿರುತ್ತವೆ. ವಯಸ್ಕ ನೊಣಗಳ ಮೈ ಮೇಲೆ ಬಿಳಿ ಮೇಣದ ಪುಡಿಯೊಂದಿರುತ್ತವೆ.

ಹತ್ತಿ ಬೆಳೆಗೆ ಬಿಳಿ ನೊಣದ ದಾಳಿಯ ಲಕ್ಷಣಗಳು

  • ಬಿಳಿನೊಣಗಳ ಬಾಧೆಯು ಎಲೆಗಳ ಕೆಳಗಿನ ಭಾಗದಲ್ಲಿ ಕಂಡುಬರುತ್ತದೆ.
  • ವಯಸ್ಕ ನೊಣ ಮತ್ತು ಮರಿ ಹುಳು(ನಿಂಫ್) ಗಳೆರಡೂ ಸಹ ಎಲೆಗಳಿಂದ ರಸವನ್ನು ಹೀರುತ್ತವೆ.
  • ದಾಳಿಗೊಳಗಾದ ಎಲೆಗಳು ಹಳದಿಯಾಗುವುದು, ಕಳಪೆ ಗುಣಮಟ್ಟದ ಹೂವುಗಳು ಮತ್ತು ಕಾಯಿ / ಹಣ್ಣು ಬಿಡುವುದರೊಂದಿಗೆ, ಕಡಿಮೆ ಸಸ್ಯದ ಬೆಳವಣಿಗೆಯ ರೋಗಲಕ್ಷಣಗಳನ್ನು ಕಾಣಬಹುದು.
  • ಬಿಳಿ ನೊಣ ಬಾಧಿತ ಬೆಳೆಗಳಲ್ಲಿ, ಸಸ್ಯಗಳನ್ನು ಅಲುಗಾಡಿಸಿದಾಗ, ಬಿಳಿ ನೊಣಗಳು ಸಣ್ಣ ಬಿಳಿ ಪತಂಗಗಳ ಮೋಡದಂತೆ ಹಾರುತ್ತವೆ.
  • ವಯಸ್ಕ ನೊಣ ಮತ್ತು ಮರಿ ಹುಳು (ನಿಂಫ್) ಗಳೆರಡೂ ಸಹ ಜೇನಿನಂತಹ ದ್ರವ (ಹನಿ ಡ್ಯೂ) ಅನ್ನು ಸ್ರವಿಸುತ್ತವೆ, ಅನಂತರ ಸ್ರವಿಸುವಿಕೆಯ ಮೇಲೆ ಕಪ್ಪು ಮಸಿ ಮೌಲ್ಡ್ ಬೆಳವಣಿಗೆಗೆ ಇದು ಕಾರಣವಾಗುತ್ತದೆ. ಕಪ್ಪು ಬಣ್ಣದ ಬೂಸ್ಟು ಬೆಳೆದ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕ್ಷೀಣಿಸಿ ಬೆಳೆ ಇಳುವರಿಯೂ ಕಡಿಮೆಯಾಗುತ್ತದೆ.
  • ಬಿಳಿ ನೊಣಗಳ ತೀವ್ರ ಅನಿಯಂತ್ರಿತ ಬಾಧೆಯು, ಎಲೆಗಳು ಮತ್ತು ಸಸ್ಯಗಳ ಸಾವಿಗೆ ಕಾರಣವಾಗಬಹುದು.
  • ಅನೇಕ ಬಿಳಿ ನೊಣ ತಳಿಗಳು, ವೈರಸ್ ನಂಜು ರೋಗವನ್ನು ಹರಡಬಹುದು.

 

      Whitefly on cotton

 

ಹತ್ತಿ ಬೆಳೆಯಲ್ಲಿ ಬಿಳಿ ನೊಣಗಳ ಹಾವಳಿ ತಪ್ಪಿಸುವುದು ಹೇಗೆ?

  • ಗಡಿಗಳಲ್ಲಿ ಬಿಳಿ ನೊಣಗಳನ್ನು ಆಕರ್ಷಕ ಬೆಳೆಗಳನ್ನು ತಡೆಗೋಡೆಯಾಗಿ ಬೆಳೆಸಿ

              ಉದಾಹರಣೆಗೆ: ಮೆಕ್ಕೆ ಜೋಳ, ಕಾಡು ಹತ್ತಿ.

              Border crops to control whiteflies on cotton

  • ಹಳದಿ ಬಣ್ಣದ ಅಂಟು ಹಾಳೆ (Yellow sticky Gum sheets) ಗಳನ್ನು ಕಟ್ಟುವುದರಿಂದ, ಅದರಲ್ಲಿ ವಯಸ್ಕ ನೊಣಗಳು ಸಿಕ್ಕಿಹಾಕಿಕೊಂಡು ಸಾಯುತ್ತವೆ.
  • ಬಿಳಿ ನೊಣಗಳ ಬಾಧೆಗಾಗಿ, ಬೆಳೆಗಳ ನಿಯಮಿತ ತಪಾಸಣೆ ಮತ್ತು ಆರಂಭಿಕ ಹಂತಗಳಲ್ಲಿ ನಿರ್ವಹಣೆ ಮಾಡುವುದು ಸುಲಭವಾಗಿರುತ್ತದೆ ಮತ್ತು ಖರ್ಚೂ ಕಡಿಮೆ ಮಾಡಬಹುದು.
  • ಕಳೆಗಳು ಬಿಳಿ ನೊಣಗಳಿಗೆ ಪರ್ಯಾಯ ಆಶ್ರಯತಾಣವಾಗಿರಬಹುದು, ಆದ್ದರಿಂದ ಕ್ಷೇತ್ರಗಳನ್ನು ಕಳೆ ಮುಕ್ತವಾಗಿಡುವುದು, ಬಿಳಿ ನೊಣಗಳ ಹಾವಳಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
  • ಹಿಂದಿನ ಬೆಳೆಗಳ ಕಸದ ಸರಿಯಾದ ವಿಲೇವಾರಿ ಮತ್ತು ಮಣ್ಣಿನ ಸೌರೀಕರಣವು, ಮುಂದಿನ ಬೆಳೆಗೆ ಬಿಳಿನೊಣಗಳ ಹಾವಳಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

         sticky traps to attract and kill whiteflies in cotton

 

ಹತ್ತಿ ಬೆಳೆಗೆ ಬಿಳಿನೊಣದ ಹಾವಳಿ ಯಾಕೆ ಆಗುತ್ತದೆ?

                      Why insect will attack cotton

  • ದುರ್ಬಲವಾದ ಅಥವಾ ಕಡಿಮೆ ಶಕ್ತಿಯಿರುವ ಸಸ್ಯಗಳು ಹೆಚ್ಚಾಗಿ ಬಿಳಿನೊಣದ ದಾಳಿಗೆ ತುತ್ತಾಗಬಹುದು.
  • ನೀರಿನ ಕೊರತೆ ಮತ್ತು ಅತಿಯಾದ ನೀರಿನ ಕಾರಣದಿಂದಾಗಿ ಒತ್ತಡಕ್ಕೊಳಗಾದ ಸಸ್ಯಗಳು, ಈ ಕೀಟದ ದಾಳಿಗೆ ಹೆಚ್ಚು ತುತ್ತಾಗುತ್ತವೆ.
  • ಸೂರ್ಯನ ಬೆಳಕಿನ ಕೊರತೆ, ಹತ್ತಿ ಬೆಳೆಯಲು ಸೂಕ್ತ ವಲ್ಲದ ಪರಿಸ್ಥಿತಿಗಳಲ್ಲಿ ಬೆಳೆದಾಗ ಸಾಮಾನ್ಯವಾಗಿ ಬಿಳಿನೊಣಗಳು ಮತ್ತು ಎಲ್ಲಾ ಇತರ ಕೀಟಗಳನ್ನು ಆಕ್ರಮಣ ಮಾಡಲು ಆಕರ್ಷಿಸುತ್ತವೆ.
  • ಬೆಳೆಗಳಿಗೆ ಅತಿಯಾದ ಸಾರಜನಕ ಪೂರೈಕೆ, ಮೃದುವಾದ ಮತ್ತು ರಸಭರಿತವಾದ ಸಸ್ಯದ ಭಾಗಗಳು, ಬಿಳಿನೊಣದ ದಾಳಿಗೆ ಖಂಡಿತವಾಗಿಯೂ ತುತ್ತಾಗುತ್ತವೆ.
  • ಕೀಟನಾಶಕಗಳನ್ನು ಅವ್ಯವಸ್ಥಿತವಾಗಿ ಬಳಸುವುದರಿಂದ, ಕೀಟಗಳಲ್ಲಿ ನಿರ್ಬಂಧಕತೆ( ರೆಸಿಸ್ಟನ್ಸ್) ಕೂಡುವುದಲ್ಲದೆ ಬಿಳಿನೊಣಗಳ ನೈಸರ್ಗಿಕ ಶತ್ರು ಕೀಟಗಳೂ ನಾಶವಾಗಲು ಕಾರಣವಾಗಬಹುದು.
  • ಬೆಳೆಯ ಕ್ಷೇತ್ರಗಳಲ್ಲಿ, ರೈತರು ಬಳಸುವ/ ಪಾಲಿಸುವ ಕಳಪೆ ಅಥವಾ ಅವ್ಯವಸ್ಥಿತ ಪೋಷಕಾಂಶಗಳ ನಿರ್ವಹಣೆ ಮತ್ತು ಕಳೆ ನಿರ್ವಹಣಾ ಅಭ್ಯಾಸಗಳು.

 

ಹತ್ತಿ ಬೆಳೆ ಪರಿಣಾಮಕಾರಿ ಬಿಳಿ ನೊಣ  ನಿರ್ವಹಣೆಗೆ  ಕೆಲುವು ಕೀಟ ನಾಶಕಗಳು

ಕ್ರ. ಸಂ

ಕೀಟನಾಶಕ ಹೆಸರು 

ಮೂಲ ಔಷದಿ

ಪ್ರಮಾಣ

1

ಬಾಯೆರ್  ಮೊವೆಂಟೊ ಎನರ್ಜಿ

ಸ್ಪೈರೊಟೆಟ್ರಮಟ್ +ಇಮಿಡಾಕ್ಲೋಪ್ರಿಡ್ 

1 ಮಿಲಿ ಪ್ರತಿಲೀಟರ್ ನೀರಿನಲ್ಲಿ

2

ಯು ಪಿ ಎಲ್ ಊಲಾಲ

ಫ್ಲೋನಿಕಾಮಿಡ್

0.4   ಗ್ರಾಂ ಪ್ರತಿಲೀಟರ್ ನೀರಿನಲ್ಲಿ

3

ಬಾಸಫ್  ಸೆಫಿನ

ಅಫಿಡೊಪೈರೋಪೆನ್

2 ಮಿಲಿ  ಪ್ರತಿಲೀಟರ್ ನೀರಿನಲ್ಲಿ

4

ಸಿಂಜೆಂಟಾ ಪೆಗಾಸಸ್

ಡೈಯಾಫೆಂಥಿರಾನ್

 1.5 ಗ್ರಾಂ ಪ್ರತಿಲೀಟರ್ ನೀರಿನಲ್ಲಿ

5

ಸುಮಿಟೊಮೊ  ಸುಮಿಪ್ರೆಮ್ಪ್ಟ್

ಪೈರಿಪ್ರಾಕ್ಸಿಫೆನ್ + ಫೆನ್ಪ್ರೊ ಪಾತ್ರಿನ್  

1.5 ಮಿಲಿ ಪ್ರತಿಲೀಟರ್ ನೀರಿನಲ್ಲಿ

6

ಧನುಕಾ ಕ್ಯಾಲ್ಡಾನ್ ಎಸ್ ಪಿ

ಕಾರ್ಟಾಫ್ ಹೈಡ್ರೋಕ್ಲೋರೈಡ್

2 ಗ್ರಾಂ ಪ್ರತಿಲೀಟರ್ ನೀರಿನಲ್ಲಿ

7

ಸುಮಿಟೊಮೊ ಡ್ಯಾನ್ ಟ್ಯಾಟ್ಸು

ಕ್ಲೋಥಿಯಾನಿಡೀನ್

0.08 ಗ್ರಾಂ ಪ್ರತಿಲೀಟರ್ ನೀರಿನಲ್ಲಿ

8

ಶಾಮರಾಕ್ ಪ್ರೈಮ್ ಗೋಲ್ಡ್ 

ಅಸ್ಟ್ಯಾಮಿಪ್ರಿಡ್

0.5 ಗ್ರಾಂ ಪ್ರತಿಲೀಟರ್ ನೀರಿನಲ್ಲಿ

9

ಗ್ರಿನೊವೇಟ್ ಗೋಜಿರ

ಫಿಪ್ರೋನೀಲ್ + ಅಸ್ಟ್ಯಾಮಿಪ್ರಿಡ್

2 ಮಿಲಿ ಪ್ರತಿಲೀಟರ್ ನೀರಿನಲ್ಲಿ

10

ಪಿ ಐ ಓಷೀನ್

ಡಿನೋಟಿಫೆರೊನ್

0.4 ಗ್ರಾಂ  ಪ್ರತಿಲೀಟರ್ ನೀರಿನಲ್ಲಿ

 

 Insecticides to control whiteflies on cotton

ಗಮನಿಕೆ

  • ಕೀಟ ನಾಶಕಗಳ ಹೆಚ್ಚು ಪರಿಣಾಮಕಾರಿ ಫಲಿತಾಂಶಗಳಿಗಾಗಿ ಸಂಜೆಯ ಹೊತ್ತಿನಲ್ಲಿ ಸಿಂಪಡಿಸಿ.
  • ನೀವು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೀಟನಾಶಕಗಳನ್ನು ಬಳಸುತ್ತಿದ್ದರೆ, ಹೊಂದಾಣಿಕೆಯಿರುವ ಕೀಟನಾಶಕಗಳನ್ನು ಮಾತ್ರ  ಮಿಶ್ರಣ ಮಾಡಿ.

ಚಿತ್ರಗಳ ಕೃಪೆ : ಗೂಗಲ್ [Image courtesy -GOOGLE]

ಸಂಜೀವರೆಡ್ಡಿ ಕೆ
ಕೃಷಿ ತಜ್ಞರು , ಬಿಗ್ ಹ್ಯಾಟ್

                                      ************

ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ [ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ] 8050797979 ಗೆ ಕರೆ ಮಾಡಿ ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ. 8050797979 ಸಂಖ್ಯೆಗೆ ವಾಟ್ಸಾಪ್ ನಲ್ಲೂ ಸಂಪರ್ಕಿಸಬಹುದು.

-------------------------------------------------------------------------------------------------------

ಹಕ್ಕುಚ್ಯುತಿ(ಡಿಸ್ಕ್ಲ್ಯಮರ್): ಉತ್ಪನ್ನದ (ಗಳ) ಕಾರ್ಯಕ್ಷಮತೆಯು ಬಳಕೆಗೆ ಉತ್ಪಾದಕರ ಮಾರ್ಗಸೂಚಿಗಳ ಪ್ರಕಾರ ಒಳಪಟ್ಟಿರುತ್ತದೆ. ಬಳಕೆಗೆ ಮೊದಲು ಉತ್ಪನ್ನ (ಗಳ) ಕರಪತ್ರವನ್ನು ಎಚ್ಚರಿಕೆಯಿಂದ ಓದಿ. ಉತ್ಪನ್ನ(ಗಳ)/ ಮಾಹಿತಿಯ ಬಳಕೆ ಬಳಕೆದಾರರ ವಿವೇಚನೆಗೆ ಅನುಗುಣವಾಗಿರುತ್ತದೆ.

 

 

 

 

 

 

 

 


Leave a comment

This site is protected by hCaptcha and the hCaptcha Privacy Policy and Terms of Service apply.


Explore more

Share this