ಬೆಂಡೆಕಾಯಿ ಬೆಳೆಯಲ್ಲಿ ಹಳದಿ ನಾಡಿ ನಂಜು ರೋಗದ (YVMV) ನಿರ್ವಹಣೆ

ಬೆಂಡೆಕಾಯಿ  (Abelmoschus esculentus ) ಭಾರತದಲ್ಲಿ ಬೆಳೆಯುವ ಸಾಮಾನ್ಯ ತರಕಾರಿ, ಇದನ್ನು ಲೇಡಿಫಿಂಗರ್ ಎಂದೂ ಕರೆಯುತ್ತಾರೆ.

       Bhendi fruit

ಇತರ ಬೆಳೆಗಳಂತೆ ಬೆಂಡೆಕಾಯಿ ಬೆಳೆಯೂ ವಿವಿಧ ರೋಗಕಾರಕ ವೈರಸ್‌ಗಳು, ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಮೈಕೋಪ್ಲಾಸ್ಮಾಗಳು, ಜಂತು ಹುಳು (ನೆಮಟೋಡ್)  ಮತ್ತು ಕೀಟಗಳಿಂದ ದಾಳಿಗೊಳಗಾಗುತ್ತದೆ.

  Bhendi diseases

ಬೆಂಡೆಕಾಯಿ ಬೆಳೆಯಲ್ಲಿ ಹಳದಿ ನಾಡಿ ನಂಜು ರೋಗವು ಅತ್ಯಂತ ವಿನಾಶಕಾರಿ ರೋಗವಾಗಿದೆ. ಆರಂಭಿಕ ಹಂತಗಳಲ್ಲಿ ಬೆಳೆಗೆ ಸೋಂಕು ತಗುಲಿದರೆ 80% ನಷ್ಟು ಬೆಳೆ ನಷ್ಟವಾಗುವುದು ಸರ್ವೇ ಸಾಮನ್ಯ.

 

ರೋಗದ ಲಕ್ಷಣಗಳು:

  • ರೋಗದ ವಿಶಿಷ್ಟ ಲಕ್ಷಣಗಳೆಂದರೆ ರೋಗ ಸೋಂಕಿತ ಚಿಗುರು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಣ್ಣಗಾಗುತ್ತವೆ.
  • ರೋಗದ ತೀವ್ರತೆಯು ಮುಂದುವರೆದಂತೆ ಸಂಪೂರ್ಣ ಗಿಡದ ಎಲೆಗಳು ಹಸಿರು ಬಣ್ಣವನ್ನು ಕಳೆದುಕೊಂಡು ಮಸುಕಾಗುತ್ತವೆ.

       Bhindi YMVV

  • ಸೋಂಕಿತ ಸಸ್ಯಗಳು ಕುಂಠಿತ ಬೆಳವಣಿಗೆಯನ್ನು ಪ್ರದರ್ಶಿಸುತ್ತವೆ ಮತ್ತು ವಿಕೃತ ಆಕಾರದ, ಸಣ್ಣ, ಹಳದಿ ಮಿಶ್ರಿತ ಹಸಿರು ಹಣ್ಣುಗಳನ್ನು ಹೊಂದಿರುತ್ತವೆ.

         Bhendi YMVV 2

ಬೆಂಡೆಕಾಯಿ ಬೆಳೆಯಲ್ಲಿ ಹಳದಿ ನಾಡಿ ನಂಜು ರೋಗ ಹೇಗೆ ಹರುಡುತ್ತದೆ? 

  • ಹಳದಿ ನಾಡಿ ನಂಜು ರೋಗವು ಬಿಳಿ ನೊಣ (ಬೆಮಿಸಿಯಾ ತಬಾಸಿ) ಕೀಟದ ಹಾವಳಿಯಿಂದ ಹರಡುತ್ತದೆ.
  • ಬೇಸಿಗೆಯ ತಿಂಗಳುಗಳಲ್ಲಿ ಬಿಳಿ ನೊಣಗಳ ಬೆಂಡೆ ಬೆಳೆಯ ಮೇಲೆ ಹಾವಳಿ ಹೆಚ್ಚು ತೀವ್ರವಾಗಿರುತ್ತದೆ ಮತ್ತು  ಹಳದಿ ನಾಡಿ ನಂಜು ರೋಗದ   ವೈರಾಣು ಸೋಂಕುಗಳು ಸಹ ಹೆಚ್ಚಾಗುತ್ತದೆ.

                 Whiteflies on Bhendi

 

ನಿರ್ವಹಣಾ ಕ್ರಮಗಳು

  • ಬೆಳೆಯನ್ನು ಹಳದಿ ನಾಡಿ ನಂಜು ರೋಗ ಹರಡುವ ಬಿಳಿ ನೊಣ ಹಾಗು ಇತರ ರಸ ಹೀರುವ ಕೀಟಗಳನ್ನು ಕೀಟನಾಶಕ ಬಳಸಿ  ನಿಯಂತ್ರಿಸಬೇಕು.
  • ಅಮೋನಿಯ(ಯೂರಿಯ ಮಾದರಿ ) ಸಾರಜನಕವನ್ನು ಹೆಚ್ಚಾಗಿ ಬಳಸಿದರೆ ವೈರಾಣು ಸೋಂಕುಗಳಿಗೆ ಅನುಕೂಲವಾಗುತ್ತದೆ ಅದನ್ನು ಬಳಸುವುದು ಕಡಿಮೆ ಮಾಡಿ ನೈಟ್ರೇಟ್ ಯುಕ್ತ ಸಾರಜನಕ ಬಳಸಿದರೆ ಉತ್ತಮ.
  • ಜಮೀನುಗಳಿಂದ ರೋಗ ಪೀಡಿತ ಸಸ್ಯಗಳನ್ನು ತೆಗೆದುಹಾಕುವುದು ಮತ್ತು ನಾಶಪಡಿಸುವುದು ತುಂಬಾ ಅವಶ್ಯಕ.
  • ಕ್ರೋಟಾನ್‌ ಜಾತಿಯ ಮತ್ತು ಇತರ ಹಳದಿ ನಾಡಿ ನಂಜು ರೋಗದ ಆತಿಥೇಯ ಕಳೆಗಳನ್ನು ನಾಶಮಾಡಬೇಕಾಗುತ್ತದೆ.
  • ಬೆಳೆ ಪರಿವರ್ತನೆ
  • ರೋಗ ಮುಕ್ತ ಸಸ್ಯಗಳಿಂದ ಸಂಗ್ರಹಿಸಿದ ಬೀಜಗಳನ್ನು ಬಳಸಿ

ಪರಿಣಾಮಕಾರಿ ನಿಯಂತ್ರಣಕ್ಕಾಗಿ ಈ ಕೆಳಿಗಿನ ಸಂಯೋಜಸಿದ ಸಿಂಪಡಣೆಗಳನ್ನು ಬಳಸಿ :

ಮೊದಲ ಸಿಂಪಡಣೆ:

ವ್ಯಾನ್‌ಪ್ರೊಜ್ ವಿ-ಬೈಂಡ್- 3 ಮಿಲಿ/ ಲಿ + ಮ್ಯಾಗ್ನಮ್ Mn  0.5 ಗ್ರಾಂ / ಲಿ  ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು

ಎರಡನೇ ಸಿಂಪಡಣೆ 7-8 ದಿನಗಳ ನಂತರ:

ಪ್ರೋಕಿಸನ್ - 1 ಗ್ರಾಂ / ಲಿ   + ಪೇಗಸೂಸ್1 ಗ್ರಾಂ / ಲಿ  +  ಅಂಟ್ರಕಾಲ್ -3 ಗ್ರಾಂ / ಲಿ ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.

ಮೂರನೇ ಸಿಂಪಡಣೆ 7-8 ದಿನಗಳ ನಂತರ:

ಪೆರ್ಫೆಕ್ಟ್ - 1 ಗ್ರಾಂ / ಲಿ + ಮ್ಯಾಗ್ನಮ್ Mn  0.5 ಗ್ರಾಂ / ಲಿ  ನೀರಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು

 

 

For more chemicals to control YVMV in Bhendi, please click below link

 https://www.bighaat.com/collections/management-of-yvmv-in-okra

 Created By: 

Aishwarya Gujjal.

SME, Bighaat

*****************

Image courtesy: Google

++++++++++++++++++++++++++++++++++++++

For more information kindly call on 8050797979 or give missed call on 180030002434 during office hours 10 AM to 5 PM

---------------------------------------------------------

Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.


Leave a comment

This site is protected by hCaptcha and the hCaptcha Privacy Policy and Terms of Service apply.


Explore more

Share this