ಮೆಣಸಿನಕಾಯಿ ಬೆಳೆಯಲ್ಲಿ ನಂಜುರೋಗದ (ವೈರಸ್) ನಿರ್ವಹಣೆ

7 comments

     

                         

 

ಪ್ರಮುಖ ತರಕಾರಿ ಬೆಳೆಗಳಲ್ಲಿ ಒಂದಾದ ಮೆಣಸಿನಕಾಯಿ (ಕ್ಯಾಪ್ಸಿಕಂ ಆನಮ್) ಬೆಳೆಯು ಅದರ ಖಾರವಾದ ಹಣ್ಣುಗಳಿಂದ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದು, ಪ್ರಸ್ತುತ ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಹಸಿರು ಹಾಗೂ ಕೆಂಪು ಹಣ್ಣುಗಳು ಎರಡಕ್ಕೂ ಅತ್ಯಂತ ಒಳ್ಳೆಯ ಬೆಡಿಕೆಯಿದ್ದು, ರೈತರಿಗೆ ಇದೊಂದು ವಾಣಿಜ್ಯಿಕ ಬೆಳೆಯಾಗಿ ಹೊರಹೊಮ್ಮಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಬೆಳೆಯು ಹಲವಾರು ನಂಜುರೋಗಗಳಿಗೆ (ವೈರಸ್) ಹೆಚ್ಚು ತುತ್ತಾಗುವುದು ಕಂಡುಬಂದಿದ್ದು, ಇದರಿಂದ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ, ಜೊತೆಗೆ ಈ ರೋಗಕ್ಕೆ ಅನುಕೂಲಕರ ವಾತಾವರಣ ಇದ್ದಲ್ಲಿ ಸಂಪೂರ್ಣ ಬೆಳೆಯನ್ನು ನಾಶಪಡಿಸುತ್ತದೆ. 

      ಮೆಣಸಿನಕಾಯಿ ಬೆಳೆಗೆ ತಗಲುವ ನಂಜುರೋಗಗಳಲ್ಲಿ ಪ್ರಮುಖವಾದವುಗಳೆಂದರೆ ಎಲೆ ಮುದುಡು ಅಥವಾ ಎಲೆ ಸುರುಳಿ ನಂಜುರೋಗ, ತಂಬಾಕು ಮೊಸಾಯಿಕ್ ನಂಜುರೋಗ (Tobacco Mosaic Virus), ಟಾಸ್ಪೋ ನಂಜುರೋಗ TOSPO VIRUS (ಟೊಮ್ಯಾಟೊ ಮಚ್ಚೆ ಸೊರಗು ನಂಜುರೋಗ)           

                

ಜೆಮಿನಿ ನಂಜಾಣು (ವೈರಸ್) ರೋಗಗಳು

1. ಮೆಣಸಿನಕಾಯಿ ಎಲೆ ಮುದುಡು/ಸುರುಳಿ ನಂಜುರೋಗ (Chilli Leaf Curl Virus)       

     ಇದನ್ನು ಮೆಣಸಿನಕಾಯಿ ಮುರುಡ (Chilli murda) ಎಂದು ಕರೆಯಲಾಗುತ್ತಿದ್ದು, ಮೆಣಸಿನಕಾಯಿ ಬೆಳೆಗೆ ಅತ್ಯಂತ ಹಾನಿಕಾರಕ ರೋಗವಾಗಿ ಹೊರಹೊಮ್ಮಿದೆ. ಇದರ ಹಾನಿಯಿಂದ ಉಂಟಾಗುವ ವಿಶಿಷ್ಟ ಲಕ್ಷಣಗಳೆಂದರೆ, ಮೊದಲನೆಯದಾಗಿ ಎಲೆ ಸುರುಳುವುದು, ಎಲೆಗಳ ಅಂಚುಗಳು ಮುದುಡುವುದು, ಎಲೆ ಸುಕ್ಕುಗಟ್ಟುವುದು ಕಂಡುಬರುತ್ತದೆ. ನಂತರ ಎಲೆಯ ಮೇಲೆ ಸುಟ್ಟ ಗುರುತುಗಳು ಕಂಡುಬಂದು ಎಲೆಗಳು ಒಣಗಲು ಪ್ರಾರಂಭಿಸುತ್ತವೆ, ಜೊತೆಗೆ ಎಲೆಯ ಮಧ್ಯ ಭಾಗದಲ್ಲಿ ಹಾಗೂ ತೊಟ್ಟುಗಳಲ್ಲಿ ಬಾವು/ಊತವನ್ನು ಸಹ ಕಾಣಬಹುದು.

                

        ಇದರಿಂದ ಗಿಡದ ಬೆಳವಣಿಗೆ ಕುಂಠಿತವಾಗುವುದಲ್ಲದೆ, ಎಲೆಗಳ ಗಾತ್ರ ಕಡಿಮೆಯಾಗಿ ವರಟಾಗುತ್ತವೆ ಜೊತೆಗೆ ಎಲೆಗಳು ಪೊದೆಯಾಕಾರದಲ್ಲಿ ಮುದುಡಿಕೊಂಡಿರುತ್ತವೆ. ಕೊನೆಗೆ ಗಿಡವು ಕುಬ್ಜವಾಗಿ ಕಾಣುತ್ತದೆ. ಇಂತಹ ಗಿಡಗಳಲ್ಲಿ ಸರಿಯಾಗಿ ಹೂವು ಹಾಗೂ ಕಾಯಿ ಕಟ್ಟುವುದಿಲ್ಲ. ಈ ನಂಜುರೋಗವು ರಸ ಹೀರುವ ಕೀಟವಾದ ಬಿಳಿನೋಣಗಳಿಂದ ಹರಡುತ್ತದೆ.  

2. ತಂಬಾಕು ಮೊಸಾಯಿಕ್ ನಂಜುರೋಗ (Tobacco Mosaic Virus)

        ಈ ರೋಗದ ವಿಶಿಷ್ಟ ಲಕ್ಷಣವೆಂದರೆ ಎಲೆಗಳ ಮೇಲೆ ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣದ ಭಾಗವನ್ನು ಕಾಣಬಹುದು, ನಂತರ ಗಿಡದ ಬೆಳವಣಿಗೆ ಕುಂಠಿತವಾಗಿ, ಚಿಗುರೆಲೆಗಳು ಹಾಗೂ ಹೂವುಗಳು ಸುರುಳಿಯಾಗುದನ್ನು ಹಾಗೂ ವಕ್ರಾಕಾರದ ಸಾಮಾನ್ಯ ಗಾತ್ರಕ್ಕಿಂತ ಚಿಕ್ಕಾದಾದ ಎಲೆಗಳನ್ನು ಕಾಣಬಹುದು. ಅದಾಗಲೆ ತೆರೆದ ಹೂವುಗಳ ದಳದ ಮೇಲೆ ಗೆರೆಗಳನ್ನು ಸಹ ಕಾಣಬಹುದು. ಇದರಿಂದ ಹೂವುಗಳು ಕಾಯಿ ಕಟ್ಟುವುದಿಲ್ಲ. ಈ ನಂಜುರೋಗವು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ರಸ ಹೀರುವ ಕೀಟಗಳಿಂದ ಹರಡುತ್ತದೆ.                            

                 

3. ಟಾಸ್ಪೋ ನಂಜುರೋಗದ ಲಕ್ಷಣಗಳು (TOSPO VIRUS) (ಟೊಮ್ಯಾಟೊ ಮಚ್ಚೆ ಸೊರಗು ನಂಜುರೋಗ)

        ಟಾಸ್ಪೋ ನಂಜುರೋಗವು ಮುಖ್ಯವಾಗಿ ಟೊಮ್ಯಾಟೊ ಬೆಳೆಗೆ ಅತ್ಯಂತ ಹಾನಿಕಾರಕ ರೋಗವಾಗಿದ್ದು, ಇದೀಗ ಈ ರೋಗದ ಲಕ್ಷಣಗಳು ಮೆಣಸಿನಕಾಯಿ ಹಾಗೂ ಕ್ಯಾಪ್ಸಿಕಂ ಬೆಳೆಯಲ್ಲಿಯೂ ಸಹ ಕಂಡುಬರುತ್ತಿದೆ.

        ಮೆಣಸಿನಕಾಯಿ ಬೆಳೆಯಲ್ಲಿ ಈ ರೋಗದ ವಿಶಿಷ್ಟ ಲಕ್ಷಣಗಳೆಂದರೆ, ಎಲೆಗಳ ಮೇಲೆ ಉಂಗುರಾಕಾರದ ಹಳದಿ ಚುಕ್ಕೆಗಳು, ಹಣ್ಣುಗಳ ಮೇಲೆ ಹಳದಿ ಮಚ್ಚೆಗಳು ಕಾಣುವುದಲ್ಲದೆ, ಹಣ್ಣಿನ ಗಾತ್ರ ಕಡಿಮೆಯಾಗುತ್ತದೆ. ಕ್ರಮೇಣ ಗಿಡದ ಚಿಗುರು/ತುದಿ ಒಣಗತೊಡಗುತ್ತದೆ. ಹೂಗೊಂಚಲು ಹಾಗೂ ತೊಟ್ಟುಗಳ ಮೇಲೆ ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಂಡು ತದನಂತರ ಹೂಗೊಂಚಲು ಒಣಗಿ ಸುಟ್ಟಂತೆ ಕಾಣತೊಡಗುತ್ತದೆ. ಟಾಸ್ಪೋ ನಂಜುರೋಗವು ರಸ ಹೀರುವ ಕೀಟಗಳ ಗುಂಪಿಗೆ ಸೇರಿದ ಥ್ರಿಪ್ಸ್ಗಳಿಂದ ಹರಡುತ್ತದೆ.

                

ನಂಜುರೋಗದ ನಿರ್ವಹಣೆ

1. ನಂಜುರೋಗವು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ, ಸಾಮಾನ್ಯವಾಗಿ ಬೆಳವಣಿಗೆಯ ಮೊದಲ ಹಂತದಲ್ಲಿ ಅಂದರೆ 25 ದಿನಗಳ ವರೆಗೆ ಅತ್ಯಂತ ವೇಗವಾಗಿ ಹರಡುತ್ತದೆ, ಎಕೆಂದರೆ ಸಸ್ಯಗಳು ವಿಶಿಷ್ಟವಾಗಿ ಈ ಎಳೆಯ ಹಂತದಲ್ಲಿ ದುರ್ಬಲವಾಗಿದ್ದು ಅತ್ಯಂತ ಸುಲಭವಾಗಿ ನಂಜುರೋಗದ ಭಾದೆಗೆ ಒಳಗಾಗುತ್ತವೆ. ಆದರೆ ಅವುಗಳ ರೋಗ ಲಕ್ಷಣಗಳು ಮಾತ್ರ ಬೆಳೆಯ ನಂತರದ ಹಂತದಲ್ಲಿ ಕಂಡುಬರುತ್ತವೆ.

                

2. ಆದ್ದರಿಂದ ಸಸಿಗಳನ್ನು ರಸ ಹೀರುವ ಕೀಟಗಳಾದ ಬಿಳಿನೊಣ, ಥ್ರಿಪ್ಸ್, ಗಿಡಹೇನು, ಸಸ್ಯ ಜಿಗಿಹುಳು, ಹಾಗೂ ಇನ್ನಿತರ ಕೀಟಗಳ ಭಾದೆಗೆ ಒಳಗಾಗದಂತೆ ಸಂರಕ್ಷಿತ ವಾತಾವರಣದಲ್ಲಿ ಅಂದರೆ ನರ್ಸರಿಗಳಲ್ಲಿ ಬೆಳೆಸಬೇಕು ಇದರಿಂದ ನಂತರದ ಹಂತದಲ್ಲಿ ನಂಜುರೊಗ ಬರುವುದನ್ನು ತಡೆಯಬಹುದು

                

3. ಸಸಿಗಳನ್ನು ಹೊಲದಲ್ಲಿ ನಾಟಿ ಮಾಡಿದ ನಂತರ ನಂಜುರೋಗವನ್ನು ತಡೆಯಲು ಮುಖ್ಯವಾಗಿ ರಸ ಹೀರುವ ಕೀಟಗಳನ್ನ ಹತೋಟಿಯಲ್ಲಿಡಬೇಕು.             

                    

4. ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡುವುದರ ಜೊತೆಗೆ, ಗಿಡಗಳಿಗೆ ಸಸ್ಯ ಉತ್ತೇಜಕಗಳನ್ನು ನೀಡುವುದರಿಂದ ಸಸ್ಯಗಳಲ್ಲಿ ಹಲವಾರು ಬೆಗೆಯ ಪ್ರತಿರೋಧಕ ಶಕ್ತಿಗಳು ಅಭಿವೃದ್ಧಿಗೊಂಡು, ಅವುಗಳು ನಂಜಾಣುಗಳನ್ನು ಬಂಧಿಸುವಲ್ಲಿ ಹಾಗೂ ಅವುಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ.   

       

 ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡಲು ಹಾಗೂ ಸಸ್ಯಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮೇಲೆ ತಿಳಿಸಿದ ಎಲ್ಲಾ ನಂಜುರೋಗಗಳನ್ನು ನಿರ್ವಹಣೆ ಮಾಡಲು ಈ ಕೆಳಗಿನ ಉತ್ಪನ್ನಗಳನ್ನು/ಮಿಶ್ರಣಗಳನ್ನು ಸಿಂಪಡಿಸಬಹುದು.

 ಒಂದು ಸಿಂಪರಣೆಯಿಂದ ಇನ್ನೊಂದು ಸಿಂಪರಣೆಗೆ ಕನಿಷ್ಟ 7 ದಿನಗಳ ಅಂತರವನ್ನು ನೀಡಿ

  ಮೇಲೆ ತಿಳಿಸಿದ ಎಲ್ಲಾ ಬಗೆಯ ನಂಜುರೋಗಗಳ ನಿರ್ವಹಣೆಗೆ ನೈಸರ್ಗಿಕ ಪರಿಹಾರಗಳು ಬಿಗ್‌ಹಾಟ್‌ನಲ್ಲಿ ಲಭ್ಯವಿದೆ

ವಿ-ಬೈಂಡ್ (V-BIND)

ಪರ್ಫೆಕ್ಟ್ ( PERFEKT )

ವೈರಲ್ ಔಟ್ (VIRAL OUT)

ನೋ ವೈರಸ್ (NO VIRUS)

ದನವಂತ್ರಿ (DANAVANTHRI)

 

  • ನೈಸರ್ಗಿಕ ಔಷಧಿಗಳೊಂದಿಗೆ ಮ್ಯಾಂಗನೀಸ್ ಸೂಕ್ಶ್ಮ ಅಥವಾ ಲಘು ಪೋಷಕಾಂಶಗಳ ಮಿಶ್ರಣವನ್ನು ಸೇರಿಸಿ ಸಿಂಪರಣೆ ಮಾಡಿದಾಗ ನಂಜುರೋಗದ ನಿರ್ವಹಣೆ ಅಥವಾ ತಡೆಗಟ್ಟುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಮ್ಯಾಂಗನೀಸ್ ಸೂಕ್ಶ್ಮ ಪೋಷಕಾಂಶಗಳನ್ನು ಹೊಂದಿರುವ ಉತ್ಪನ್ನಗಳು ಬಿಗ್ಹಾಟ್ನಲ್ಲಿ ಲಭ್ಯವಿದೆ

ನ್ಯಾನೊ ಎಮ್.ಎನ್. (NANO Mn)

ಮ್ಯಾಗ್ನಮ್ ಎಮ್.ಎನ್.  (MAGNUM Mn)

ಸೀಮನ್ (SEAMAN)

  • ಈ ಔಷಧಿಗಳ ಸಿಂಪರಣೆಯ ನಂತರ ನಂಜುರೋಗ ಪೀಡಿತ ಸಸ್ಯಗಳಲ್ಲಿನ ನಂಜುರೋಗ ಲಕ್ಷಣಗಳಾದ ಎಲೆ ಸುರುಳುವುದು, ಎಲೆ ಮುದುಡುವಿಕೆ, ಎಲೆ ಸುಕ್ಕುಗಟ್ಟುವುದು, ಎಲೆ ಸುಡುವಿಕೆ, ಇನ್ನಿತರ ರೋಗಲಕ್ಷಣಗಳು ಕಡಿಮೆಯಾಗಿ, ಸಸ್ಯಗಳಲ್ಲಿ ಹೊಸ ಬೆಳವಣಿಗೆ ಕಂಡುಬರುತ್ತದೆ.

                                  

ನಂಜುರೋಗ ಪೀಡಿತ ಮೆಣಸಿನಕಾಯಿ           ನೈಸರ್ಗಿಕ ಔಷಧಿಯ ಸಿಂಪರಣೆ ನಂತರ 

ಗಮನಿಸಿ:

  • ಯಾವುದೇ ಬೆಳೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕವನ್ನು ಬಳಸುವುದರಿಂದ ಸಸ್ಯಗಳು ನಂಜುರೋಗಗಳಿಗೆ ಹೆಚ್ಚು ತುತ್ತಾಗುತ್ತವೆ.

  • ವಿಶೇಷವಾಗಿ ಅಮೋನಿಯಾಕಲ್ ರೂಪದಲ್ಲಿರುವ ಸಾರಜನಕ ಹಾಗೂ ಇನ್ನಿತರ ರಸಗೊಬ್ಬರಗಳು ಉದಾಹರಣೆ: ಯುರಿಯಾ, ಅಮೊನಿಯಮ್ ಸಲ್ಫೇಟ್, 19:19:19, ಇನ್ನಿತರವುಗಳು.

  • ಎಕೆಂದರೆ ಈ ರೂಪದಲ್ಲಿರುವ ರಸಗೊಬ್ಬರಗಳು ನಂಜಾಣುಗಳ ಸಂಖ್ಯೆಯನ್ನು ಏರಿಕೆಮಾಡುವ ಮೂಲಕ ನಂಜುರೋಗದ ಲಕ್ಷಣಗಳು ಹೆಚ್ಚುವಲ್ಲಿ ಸಹಾಯ ಮಾಡುತ್ತವೆ. ಆದಕಾಣರ ಇಂತಹ ರಸಗೊಬ್ಬರಗಳನ್ನು ಮಿತವಾಗಿ ಉಪಯೋಗಿಸುವುದು ಉತ್ತಮ.

  • ಕೋಳಿ ಗೊಬ್ಬರವು ಹೆಚ್ಚಿನ ಪ್ರಮಾಣದಲ್ಲಿ ಅಮೊನಿಯಾಕಲ್ ಸಾರಜನಕವನ್ನು ಹೊಂದಿರುತ್ತದೆ, ಆದ್ದರಿಂದ ಅದರ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಅದಾಗ್ಯೂ ಕೋಳಿ ಗೊಬ್ಬರವನ್ನು ಉಪಯೊಗಿಸುವುದಾದರೆ, ಕನಿಷ್ಠ ಪಕ್ಷ 6 ತಿಂಗಳುಗಳ ಕಾಲ ಅದನ್ನು ಕೊಳೆಯಲು ಬಿಟ್ಟು ತರುವಾಯ, ಚನ್ನಾಗಿ ಕೊಳೆದ ಕೋಳಿ ಗೊಬ್ಬರವನ್ನು ಕೆಂಪು ಮಣ್ಣಿನೊಂದಿಗೆ ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ನಂತರ ನಿಮ್ಮ ಜಮೀನಿನಲ್ಲಿ ಬಳಕೆ ಮಾಡಿ.

  • ಅಮೈನೊ ಆಮ್ಲವುಳ್ಳ ದ್ರವೌಷಧಗಳ ಮಿತವಾದ ಬಳಕೆಯ ಮೂಲಕ ನಂಜುರೋಗವನ್ನು ತಡೆಯಬಹುದು.

  • ಮ್ಯಾಂಗನೀಸ್ ಸೂಕ್ಶ್ಮ ಪೋಷಕಾಂಶಗಳ ಪೂರೈಕೆಯಿಂದ ಅತ್ಯಂತ ಸಮರ್ಥವಾಗಿ ನಂಜುರೋಗದ ನಿರ್ವಹಣೆಯನ್ನು ಮಾಡಬಹುದು.

****

Acknowledgements: 
Images courtesy - GOOGLE 
Images courtesy- Mansoor Ahmed, Farmer, Gadwala, Telangana

   

Dr. Asha, K.M.,

Subject Matter Expert, Bighaat

_______________________________________________________________

Disclaimer: The performance of the product(s) is subject to usage as per manufacturer guidelines. Read enclosed leaflet of the product(s) carefully before use. The use of this product(s) /information is at the discretion of user.


7 comments


  • ರಾಘವೇಂದ್ರ

    ಮಣಸಿನಕಾಯಿ ಮೊದಲ ಅಂತದ ಔಷಧಿ ಮತ್ತು ಗೋಬ್ಬರ


  • ಗೀರಿಶ್ ಬಿ

    ಸರ್ ನಾನು ಕಾಕಡ ಮಲ್ಲಿಗೆ ಗಿಡ ಹಚ್ಚಿದೆನಿ ಒಂದು ವರ್ಷ ಆಯಿತು ಮಜ್ಜಿಗೆ ರೋಗ ಇದೆ ಮತ್ತೆ ಸ್ವಲ್ಪ ಇಳುವರಿ ಕೂಡ ಕಡಿಮೆ ಬರ್ತಾ ಇದೆ ಇದಕ್ಕೆ ಪರಿಹಾರ


  • Da

    Helpme


  • Sahebagoud. Dundappa. Balundagi

    ಹತ್ತಿ , ಕೆಂಪು ಮೆಣಸಿನಕಾಯಿ ನೀವಾಹರಣೆ


  • Muttanna Baligar

    Muturu Rog


Leave a comment

This site is protected by reCAPTCHA and the Google Privacy Policy and Terms of Service apply.


Explore more

Share this