ಟೊಮ್ಯಾಟೊ ಬೆಳೆಯಲ್ಲಿ ದುಂಡಾಣು ಗಜ್ಜಿ( ಬ್ಯಾಕ್ಟೀರಿಯಲ್ ಸ್ಪೆಕ್) ರೋಗದ ಪರಿಣಾಮಕಾರಿ ನಿಯಂತ್ರಣ
ನಮ್ಮ ರೈತರು ಹೆಚ್ಚಾಗಿ ಬೆಳೆಯುವ ವಾಣಿಜ್ಯ ಬೆಳೆಗಳಲ್ಲಿ ಟೊಮ್ಯಾಟೊ ಬೆಳೆಯೂ ಒಂದು. ಟೊಮ್ಯಾಟೊ ಬೆಳೆಯನ್ನು ವರ್ಷ ವಿಡೀ ಬೆಳೆದರೂ ಹಲವು ಋತು ಅಥವಾ ಕಾಲಗಳಲ್ಲಿ ಕೆಲುವು ರೋಗಗಳು, ಬೆಳೆಯ ಮೇಲೆ ಆಕ್ರಮಿಸಿ ನಷ್ಟ ಮಾಡಬಹುದು.
ಮಳೆಗಾಲದಲ್ಲಿ ಟೊಮ್ಯಾಟೊ ಬೆಳೆಯನ್ನು ಕಾಡುವ ರೋಗಗಳಲ್ಲಿ ದುಂಡಾಣು ಗಜ್ಜಿ ರೋಗ ಹೆಚ್ಚು ನಷ್ಟವನ್ನು ಮಾಡಬಲ್ಲದು. ರೋಗದ ಲಕ್ಷಣಗಳು ಇತರ ಶಿಲಿಂದ್ರ ರೋಗದ ಮಾದರಿಯಲ್ಲೇ ಕಾಣತ್ತದೆ.
ಟೊಮ್ಯಾಟೊ ಬೆಳೆಯ ಮೇಲಿನ ದುಂಡಾಣು ಗಜ್ಜಿ ರೋಗ ಸ್ಯೂಡೋಮೊನಾಸ್ ಸಿರಿಂಗೆ ಎಂಬ ದುಂಡಾಣುವಿನಿಂದ (ಬ್ಯಾಕ್ಟೀರಿಯಾ) ಉಂಟಾಗುತ್ತದೆ.
ಟೊಮ್ಯಾಟೊ ಬೆಳೆಯಲ್ಲಿ ದುಂಡಾಣು ಗಜ್ಜಿ ರೋಗದ ಲಕ್ಷಣಗಳು
- ದುಂಡಾಣು ಗಜ್ಜಿ ರೋಗ ಟೊಮ್ಯಾಟೊ ಬೆಳೆಗೆ ತಗುಲಿದ್ದಾಗ ಮೊದಲು ಎಲೆಗಳ ಕೆಳ ಭಾಗದಲ್ಲಿ ಕಂದು ಬಣ್ಣದ ಗಾಯಗಳ ಹಾಗೆ ಗುಳ್ಳೆಗಳಾಗಿ ಕಾಣುತ್ತವೆ.
- ರೋಗದ ತೀವ್ರತೆ ಹೆಚ್ಚಾದಾಗ ಗಜ್ಜಿ ರೋಗದ ಗುಳ್ಳೆಗಳು ಕೂಡಿಕೊಂಡು, ಗಜ್ಜಿ ತರಹದ ಲಕ್ಷಣಗಳು ದೊಡ್ಡದಾಗಿ ಕಾಣುತ್ತವೆ.
- ದುಂಡಾಣು ಗಜ್ಜಿ ರೋಗ ಹಣ್ಣಗಳನ್ನೂ ಆಕ್ರಮಿಸುತ್ತದೆ, ಅವುಗಳ ಗುಣಮಟ್ಟವನ್ನು ಕಡಿಮೆ ಗೊಳಿಸುತ್ತದೆ.
- ದುಂಡಾಣು ರೋಗ ಟೊಮ್ಯಾಟೊ ಸಸಿಗಳ ಕೊಂಬೆಗಳು, ಕಾಯಿಗಳ ತೊಟ್ಟುಗಳ ಮೇಲೂ ಗಜ್ಜಿ ತರಹ ಲಕ್ಷಣಗಳು ಕಾಣುತ್ತವೆ.
ಟೊಮ್ಯಾಟೊ ಬೆಳೆಯಲ್ಲಿ ದುಂಡಾಣು ಗಜ್ಜಿ ರೋಗ ಹೆಚ್ಚು ಏಕೆ ಬರುತ್ತದೆ?
- ದುಂಡಾಣು ಗಜ್ಜಿ ರೋಗವು ವಾತಾವರಣ ಅವಲಂಭಿತ ವಾಗಿರುತ್ತದೆ. ವಾತವರಣದಲ್ಲಿ ಕಡಿಮೆ ಉಷ್ಣಗ್ರತೆ ಮತ್ತು ಹೆಚ್ಚು ತೇವಾಂಶ ವಿದ್ದಾಗ ಈ ರೋಗದ ಹಾವಳಿ ಹೆಚ್ಚಾಗಿರುತ್ತದೆ.
- ಟೊಮ್ಯಾಟೊ ತೋಟದಲ್ಲಿ ದುಂಡಾಣು ರೋಗ ವಿದ್ದು ಲಕ್ಷಣಗಳ ಮೇಲೆ ಮಳೆ ಹನಿ ಬಿದ್ದಾಗ ರೋಗ ಕಾರಕ ಕಣಗಳು ಗಾಳಿಗೆ ಸಿಡಿದು, ಗಾಳಿ ಸಹಾಯದಿಂದ ಆರೋಗ್ಯಕರ ತೋಟಗಳಿಗೆ ಹರಡಬಲ್ಲದು. ಮಳೆ ಯಾಗುವ ಮತ್ತು ಮಳೆಗಾಲದ ವಾತಾವರಣ ದುಂಡಾಣು ಗಜ್ಜಿ ರೋಗ ಹರಡಲು ಮತ್ತು ಅದರ ಪ್ರಮಾಣ ದ್ವಿಗುಣ ಗೊಳ್ಳಲು ಸಹಾಯ ಮಾಡುತ್ತದೆ.
- ಟೊಮ್ಯಾಟೊ ತೋಟದಲ್ಲಿ ಹೆಚ್ಚು ಕಳೆಗಳು ಇದ್ದಾಗ, ದುಂಡಾಣು ರೋಗದ ಲಕ್ಷಣಗಳು ಹೆಚ್ಚಾಗುತ್ತವೆ.
- ಸರಿಯಾದ ಪೋಷಕಾಂಶ ನಿರ್ವಹಣೆ ಮಾಡಿದಿದ್ದ ಪಕ್ಷದಲ್ಲಿ, ಟೊಮ್ಯಾಟೊ ಸಸಿಗಳು ರೋಗ ನಿರೋಧಕ ಶಕ್ತಿ ಇಲ್ಲದೆ, ದುಂಡಾಣು ರೋಗ ಹೆಚ್ಚಾಗುತ್ತದೆ.
- ಟೊಮ್ಯಾಟೊ ಬೆಳೆಯಲ್ಲಿ ಹಲವು ರಸ ಹೀರುವ ಕೀಟಗಳು ದಾಳಿ ಮಾಡುತ್ತವೆ, ಅವುಗಳು ರೋಗ ಪೀಡಿತ ಸಸಿಗಳಿಂದ ಆರೋಗ್ಯಕರ ಸಸಿಗಳಿಗೆ ರೋಗವನ್ನು ವ್ಯಾಪಿಸುತ್ತವೆ. ಸರಿಯಾದ ರೀತಿಯಲ್ಲಿ ರಸ ಹೀರುವ ಕೀಟಗಳನ್ನು ನಿಯಂತ್ರಣ ಮಾಡಿಲಿಲ್ಲವಾದರೆ ರೋಗವು ಹೆಚ್ಚಾಗುವ ಸಾಧ್ಯತೆಗಳು ಖಚಿತ.
- ಟೊಮ್ಯಾಟೊ ಕೃಷಿಯಲ್ಲಿ ಗಿಡದಿಂದ ಗಿಡಕ್ಕೆ ಮತ್ತು ಸಾಲು ನಿಂದ ಸಾಲಿಗೆ ರೈತರು ಅನುಸರಿಸುವ ಅಂತರ, ಬೆಳೆ ಇಳುವರಿ ಮತ್ತು ಗುಣಮಟ್ಟದ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ. ದುಂಡಾಣು ಗಜ್ಜಿ ರೋಗವು ಕಡಿಮೆ ಅಂತರ ವಿದ್ದಾಗ ಹೆಚ್ಚಾಗಿ ವ್ಯಾಪಿಸಬಲ್ಲದು. ಹೆಚ್ಚು ತೇವಾಂಶ ಎಲೆಗಳ ಮೇಲೆ ಹಾಗೂ ಇತರ ಗಿಡದ ಭಾಗಗಳ ಮೇಲೆ ಹೆಚ್ಚು ಸಮಯದವರೆಗೆ ಒಣಗದೆ ಇದ್ದಾರೆ ಈ ರೋಗ ಟೊಮ್ಯಾಟೊ ಬೆಳೆಯನ್ನು ರೋಗ ಪೀಡಿತ ಮಾಡುತ್ತದೆ.
ಹತೋಟಿ ಕ್ರಮಗಳು
- ದುಂಡಾಣು ಗಜ್ಜಿ ರೋಗವು ಬೀಜದ ಮೂಲಕ ಹರಡಬಹುದು, ಉತ್ತಮ ಗುಣಮಟ್ಟದ ಪ್ರತಿಷ್ಠಿತ ಕಂಪನಿಗಳ ಬೀಜಗಳನ್ನು ಬಳಸುವುದರಿಂದ ರೋಗವನ್ನು ತಡೆಗಟ್ಟಬಹುದು.
- ದುಂಡಾಣು ಗಜ್ಜಿ ರೋಗದ ಹರಡುವಿಕೆಯನ್ನು ತಡೆಯಲು ರೋಗನಾಶಕಳಿಂದ ಬೀಜೋಪಚಾರ ಅಥವಾ ಬೇರು ಉಪಚಾರ ಮಾಡಿದರೂ ರೋಗವನ್ನು ತಡೆಗಟ್ಟ ಬಹುದು.
- ದುಂಡಾಣು ಗಜ್ಜಿ ರೋಗವು, ಕಳೆದ ಸ್ವಜಾತಿ ಬೆಳೆಯ ಉಳಿಕೆಗಳಲ್ಲಿಯೂ ಉಳಿದಿರಬಹುದು, ಬೆಳೆ ನಂತರ ರೋಗ ಗ್ರಸ್ತ ಉಳಿಕೆಗಳನ್ನು ಸರಿಯಾದ ರೀತಿಯಲ್ಲಿ ನಾಶ ಮಾಡಬೇಕು.
- ಸರದಿ ಬೆಳೆಗಳಾಗಿ ಸಂಬಂದಿ ಜಾತಿಯ ಬೆಳೆ ಮಾಡದೆ ಬೇರೆ ಜಾತಿ ಬೆಳೆಗಳನ್ನು ಒಮ್ಮೆ ಬೆಳೆದರೆ ದುಂಡಾಣು ರೋಗ ಹರಡುವಿಕೆ ಕಡಿಮೆ ಯಾಗುತ್ತದೆ.
- ಸೂಕ್ತವಾದ ಕಾಲಕ್ಕೆ ಸೂಕ್ತ ಟೊಮ್ಯಾಟೊ ತಳಿಗಳನ್ನು ( ದುಂಡಾಣು ರೋಗ- ತಡೆಯಬಲ್ಲ) ಬೆಳೆಯುವುದರಿಂದಲೂ ದುಂಡಾಣು ಗಜ್ಜಿ ರೋಗವನ್ನು ತಪ್ಪಿಸಬಹುದು.
- ಟೊಮ್ಯಾಟೊ ಬೆಳೆಗೆ ಸರಿಯಾದ ಅಂದರೆ ಅವಶ್ಯಕತೆ ಅನುಗುಣವಾಗಿ ಹಾಗೂ ಸಮತೋಲನವಾಗಿ ನೀರನ್ನು ಕೊಡುವುದರಿಂದ ತೋಟದಲ್ಲಿ ಹಾಗೂ ಸಸಿಗಳ ಸನಿಹ ಸಮರ್ಪಕ ತೇವಾಂಶದಿಂದ ರೋಗವು ವ್ಯಾಪಿಸಲು ಸಾಧ್ಯವಾಗುವುದಿಲ್ಲ.
- ಟೊಮ್ಯಾಟೊ ತೋಟದಲ್ಲಿ ಕಳೆಗಳು ಬೆಳೆಯದಂತೆ ತೋಟವನ್ನು ಸ್ವಚ್ಛವಾಗಿ ಇಡಬೇಕು. ಕಳೆಗಳ ಮೂಲಕ , ರಸ ಹೀರುವ ಕೀಟಗಳು ದುಂಡಾಣು ರೋಗವನ್ನು ಹರುಡಬಹುದು. ಕಳೆ ಮತ್ತು ರಸ ಹೀರುವ ಕೀಟಗಳ ಸಮರ್ಪಕ ನಿರ್ವಹಣೆ ರೋಗದ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
- ಕೊನೆಯದಾಗಿ ಟೊಮ್ಯಾಟೊ ಬೆಳೆಗೆ ಅವಶ್ಯಕ, ಸಮಗ್ರ ಪೋಷಕಾಂಶಗಳನ್ನು ನೀಡಿದರೆ ದುಂಡಾಣು ರೋಗವಲ್ಲದೆ ಹಲವು ರೋಗಗಳನ್ನು ಮತ್ತು ಕೀಟಗಳ ಹಾವಳಿಯನ್ನೂ ನಿಯಂತ್ರಣ ಮಾಡಬಹುದು. ಲಘುಪೋಷಕಾಂಶಗಳನ್ನು ತಪ್ಪದೆ ನೀಡಬೇಕಾಗುತ್ತದೆ.
- ಸೂಕ್ತ ಸಮಯದಲ್ಲಿ ಮತ್ತು ಪರಿಣಾಮಕಾರಿ ದುಂಡಾಣು ರೋಗನಾಶಕಗಳ ಸಿಂಪಡಣೆ
ತಾಮ್ರ ಆಕ್ಸಿ ಕ್ಲೋರೈಡ್ (ಬ್ಲೂ ಕಾಪರ್ ಅಥವಾ ಬ್ಲ್ಯ್ಟೊಕ್ಸ್) ಅಥವಾ ತಾಮ್ರ ಹೈಡ್ರಾಕ್ಸೈಡ್ (ಕೊಸೈಡ್) - 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಅಥವಾ ತಾಮ್ರ ಇ. ಡಿ. ಟಿ. ಎ (ನೀಲ್ ಸಿ. ಯು) – 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಕ್ಲೊರೋಥಲೋನಿಲ್ + ಮೆಟಲಾಕ್ಸಿಲ್ (ಫೋಲಿಯೋಗೋಲ್ಡ್) 2 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಅಥವಾ ಕ್ಲೊರೋಥಲೋನಿಲ್ (ಜಟಾಯು ಅಥವಾ ಕವಚ್) 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ + ಬ್ರೋಮೋ ನೈಟ್ರೊ - ಪ್ರೋಪೆನ್ - ಡಿಯೋಲ್ ಡಬ್ಲ್ಯೂ/ಡಬ್ಲ್ಯೂ (ಬ್ಯಾಕ್ಟಿನಾಶ್ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬ್ಲಾಕ್ ಔಟ್ – 1 ಮಿಲಿ ಪ್ರತಿ ಲೀಟರ್ ನೀರಿನಲ್ಲಿ) ಅಥವಾ ಸ್ಟ್ರೆಪ್ಟೋ ಮೈಸಿನ್ + ಟೆಟ್ರಾಸೈಕ್ಲಿನ್ (ಕ್ರಿ ಸ್ಟೋಸೈಕ್ಲಿನ್) 6 ಗ್ರಾಂ ಪ್ರತಿ 50 ಲೀಟರ್ ನೀರಿನಲ್ಲಿ ಮಿಶ್ರ ಮಾಡಿ ಎಲೆಗಳು, ಕಾಯಿಗಳು ಮತ್ತು ಇತರ ರೋಗ ಲಕ್ಷಣ ಕಾಣುವ ಭಾಗಗಳ ಮೇಲೆ ಸಿಂಪಡಣೆ ಮಾಡಬೇಕು.
*******************************
ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ. 8050797979 ಗೆ ವಾಟ್ಸಾಪ್ ಕೂಡ ಮಾಡಬಹುದು
_____________________
K SANJEEVA REDDY,
LEAD Agronomist, BigHaat.
Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ
Leave a comment