ಲಾಭ ದಾಯಕ ಬಿಟಿ ಹತ್ತಿ [Bt ಹತ್ತಿ] ಸಾಗುವಳಿಗೆ ಪರಿಸರ ಮತ್ತು ಪೋಷಕಗಳ ಅವಶ್ಯಕತೆಗಳು
ಹತ್ತಿ ಬೆಳೆಯು ಭಾರತದಲ್ಲಿ ಕೃಷಿ ಮಾಡುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ ಹಾಗೂ ಹತ್ತಿ ನೂಲು ಅಥವಾ ನಾರು ಜವಳಿ ಉದ್ಯಮಕ್ಕೆ ಅತ್ಯಗತ್ಯವಾದ ಕಚ್ಚಾ ವಸ್ತುವಾಗಿದೆ. ಹತ್ತಿ ಬೆಳೆಯಲು ಕೃಷಿ ಭೂಮಿಯಲ್ಲಿ ಕೃಷಿಕರು ಹತ್ತಿ ಬೆಳೆ ಮಾಡಬೇಕಾಗುವುದರಿಂದ, ಕೃಷಿ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುಬಲ್ಲದು.
ಹತ್ತಿ ಬೆಳೆಯು ವಾತಾವರಣದ ಒತ್ತಡಗಳನ್ನು ತಡೆಯಬಲ್ಲ ಬೆಳೆಯಾಗಿದ್ದು ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಯಾಗಿ ಬೆಳೆಸಲಾಗುತ್ತದೆ. ಹತ್ತಿ ಬೆಳೆಯಲ್ಲಿ ಹಲವು ಪ್ರಭೇದಗಳನ್ನು ನಮ್ಮ ಭಾರತದ ರೈತರು ಬೆಳೆಯುತ್ತಿದ್ದಾರೆ. ಗೋಸಿಪಿಯಮ್ ಅರ್ಬೊರಿಯಮ್,ಗೋಸಿಪಿಯಮ್ ಹೆರ್ಬಾಸಿಯಂ,
ಗೋಸಿಪಿಯಮ್ ಹಿರ್ಸುಟಮ್ ಮತ್ತು ಗೋಸಿಪಿಯಮ್ ಬಾರ್ಬಡೆನ್ಸ್.
ಒಟ್ಟು ಹತ್ತಿ ಉತ್ಪಾದನೆಯು 90% ರಷ್ಟು ಗೋಸಿಪಿಯಮ್ ಹಿರ್ಸುಟಮ್ ಪ್ರಭೇದದಿಂದ ಉತ್ಪಾದಿಸಲಾಗುತ್ತಿದೆ.
ಪ್ರಭೇದಗಳು:
ಹತ್ತಿ ಬೆಳೆಯುವ ವಲಯಗಳನ್ನು ಆಧರಿಸಿ ಭಾರತದಲ್ಲಿ ಅನೇಕ ಬೀಜ ಉತ್ಪಾದಕರು ಬಿಟಿ ಹತ್ತಿ ಬಿತ್ತನೆ ಬೀಜಗಳ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿದ್ದಾರೆ. ಇತ್ತೀಚಿಗೆ ಮುಂಚೂಣಿಯಲ್ಲಿರುವ ಪ್ರಭೇದ ಬೋಲ್‌ಗಾರ್ಡ್ 2 - [ Bollgaurd -II] ಬಿಟಿ ಹತ್ತಿ ಬೀಜ ಉತ್ಪಾದಕರಲ್ಲಿ ಮಹೈಕೊ, ರಾಸಿ, ನೂಜಿವೀಡು, ಕ್ರಿಸ್ಟಲ್, ಸೀಡ್ ವರ್ಕ್ಸ್, ಇತ್ಯಾದಿ ಕೆಲುವು ಉತ್ಪಾದಕರಾಗಿರುತ್ತಾರೆ.
ಬೋಲ್‌ಗಾರ್ಡ್ 2 - [ Bollgaurd -II] ಬಿಟಿ ಹತ್ತಿ ಪ್ರಭೇದಗಳು ಪಟ್ಟಿ ಇಲ್ಲಿ ಹುಡುಕಿ
Sl.No. |
Trade Name |
Suppliers or producers |
1 |
ಧಾನ್ಯಾ |
|
2 |
ಅಜೀತ್ |
|
3 |
ಪ್ರವರ್ಧನ್ |
|
4 |
ಕಾವೇರಿ |
|
5 |
ರಾಶಿ |
|
6 |
ಮಹೈಕೊ |
|
7 |
ಸೀಡ್ ವರ್ಕ್ಸ್ |
|
8 |
ನುಜಿವೀಡು |
|
9 |
ಬಯೋಸೀಡ್ಸ್ |
|
10 |
ಕ್ರಿಸ್ಟಲ್ |
ಬಿಟಿ ಹತ್ತಿ ಬೆಳೆಯಲು ಸೂಕ್ತ ಕಾಲ
ಭಾರತದಲ್ಲಿ ಸಾಮಾನ್ಯವಾಗಿ ಎರಡು ಋತುಗಳಲ್ಲಿ ಹತ್ತಿ ಬೆಳೆಯುತ್ತಾರೆ,ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ರೈತರು ಸ್ವಲ್ಪ ಶೀಘ್ರವಾಗಿ ಹತ್ತಿ ಬೆಳೆ ಮಾಡುತ್ತಾರೆ. ಭಾರತದಲ್ಲಿ ರೈತರು ಹತ್ತಿಯನ್ನು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಸ್ಥಳಗಳಲ್ಲಿ ಮುಂಗಾರು ಬೆಳೆಯಾಗಿ ಬೆಳೆಯುತ್ತಾರೆ. ಹತ್ತಿಯನ್ನು ನೀರಾವರಿ ಬೆಳೆಯಾಗಿ ಮಾರ್ಚ್‌ನಿಂದ ಬೆಳೆಯಲಾಗುತ್ತದೆಯಾದರೂ, ಮಳೆಗಾಲದ ಆರಂಭದಿಂದ ಮುಂಗಾರು [ಮಳೆಗಾಲ] ಹತ್ತಿ ಕೃಷಿ ಜೂನ್-ಜುಲೈನಲ್ಲಿ ಪ್ರಾರಂಭವಾಗುತ್ತದೆ.
ತಮಿಳುನಾಡಿನಲ್ಲಿ ಹತ್ತಿ ಬೆಳೆಯನ್ನು ರೈತರು ಸಾಮಾನ್ಯವಾಗಿ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ನಡೆಯುತ್ತದೆ ಏಕೆಂದರೆ ತಮಿಳುನಾಡು ಈಶಾನ್ಯ ಗಾಳಿಯ ಮಳೆಯನ್ನು ಅವಲಂಬಿಸಿರುತ್ತದೆ. ತಮಿಳುನಾಡಿನ ಕೆಲವು ಭಾಗಗಳಲ್ಲಿ ನೀರಾವರಿ ಇದ್ದವರು ಫೆಬ್ರವರಿ - ಮಾರ್ಚ್ ಅವಧಿಯಲ್ಲಿ ಹತ್ತಿ ಬೆಳೆ ಬೇಸಿಗೆ ಬಿತ್ತನೆ ಮಾಡಲಾಗುತ್ತದೆ.
ಮಣ್ಣು ಮತ್ತು ಹವಾಮಾನ ಅಗತ್ಯತೆಗಳು
ಹತ್ತಿ ಬೆಳೆ ಚೆನ್ನಾಗಿ ಬೆಳೆಯಲು ನೀರು ಚೆನ್ನಾಗಿ ಬಸಿಯಬಹುದಾದ ಮೆಕ್ಕಲು ಕಪ್ಪು ಮಣ್ಣು, ಕೆಂಪು ಮಿಶ್ರಿತ ಕಪ್ಪು ಮಣ್ಣು ಹೆಚ್ಚು ಸೂಕ್ತವಾಗಿರುತ್ತದೆ. ಹತ್ತಿ ಸಸ್ಯಗಳು ಅಲ್ಪ ಕ್ಷಾರ ಗುಣವುಳ್ಳ ಮಣ್ಣನ್ನು ಸಹಿಸಿಕೊಳ್ಳುಬಲ್ಲವು ಆದರೆ ಹೆಚ್ಚು ಸಮಯ ನೀರು ನಿಲ್ಲುವ ಪರಿಸ್ಥಿತಿಗಳಲ್ಲಿ ಸಾಯುತ್ತವೆ.
ಹತ್ತಿ ಉಷ್ಣವಲಯದ ಮತ್ತು ಉಪ-ಉಷ್ಣವಲಯದ ಬೆಳೆಯಾಗಿದ್ದು, ಉತ್ತಮ ಮೊಳಕೆಯೊಡೆಯಲು ಕನಿಷ್ಠ 15 0C [ಸೆಂಟಿಗ್ರೇಡ್] ತಾಪಮಾನ ಬೇಕಾಗುತ್ತದೆ.
ಉತ್ತಮ ಸದೃಢ ಸಸ್ಯಗಳ ಬೆಳವಣಿಗೆಗೆ ಗರಿಷ್ಠ ತಾಪಮಾನವು ಸುಮಾರು 210 - 27 0C [ಸೆಂಟಿಗ್ರೇಡ್] ಮತ್ತು ಹತ್ತಿ ಬೆಳೆ 43 0C [ಸೆಂಟಿಗ್ರೇಡ್] ವರೆಗೆ ಸಹಿಸಿಕೊಳ್ಳಬಲ್ಲದು ಆದರೆ 21 0C [ಸೆಂಟಿಗ್ರೇಡ್] ಗಿಂತ ಕಡಿಮೆ ತಾಪಮಾನವು ಸಸ್ಯಗಳನ್ನು ಕೊಲ್ಲುತ್ತದೆ.
ಭೂಮಿ ತಯಾರಿ
ಭೂಮಿಯನ್ನು ಅವಶ್ಯಕತೆಗುಣವಾಗಿ ಉಳುಮೆ ಮಾಡಬೇಕು, ಮಳೆಯಿಂದಾಗಿ ಯಾವುದೇ ಹೆಚ್ಚುವರಿ ನೀರು ನಿಲ್ಲದೆ ಸುಲಭವಾಗಿ ಬಸಿದುಹೋಗಲು ಭೂಮಿಯ ಮಟ್ಟವನ್ನು ಸರಿ ಮಾಡಬೇಕು.
ಮಳೆಯಾಶ್ರಿತ ಬೆಳೆ ಮಾಡುವ ರೈತರು ಕ್ಲಿಷ್ಟ ಸಂಧರ್ಭ ಅಂದರೆ ಮಳೆ ಯಾಗಲಿಲ್ಲವಾದ ಪಕ್ಷದಲ್ಲಿ ಬೆಳೆಗೆ ರಕ್ಷಣಾತ್ಮಕ ನೀರು ಸರಬರಾಜು ಒದಗಿಸಲು ಮೊದಲೇ ಯೋಜಿಸಬೇಕಾಗಿರುತ್ತದೆ.
8-10 ಕೆಜಿ ಜೈವಿಕ ಗೊಬ್ಬರ [biofertilisers] ಗಳೊಂದಿಗೆ ಉತ್ಕೃಷ್ಟಗೊಳಿಸಿದ ಸುಮಾರು 10- 12 ಕೊಟ್ಟಿಗೆ ಗೊಬ್ಬರವನ್ನು ಬಿತ್ತನೆ ಮಾಡವ 12-15 ದಿನಗಳ ಮೊದಲು ಭೂಮಿಗೆ ಎರಚಿ ಮಿಶ್ರಣ ಮಾಡಬೇಕು.
ಜೈವಿಕ ಗೊಬ್ಬರಗಳೊಂದಿಗಿನ ಕೊಟ್ಟಿಗೆ ಗೊಬ್ಬರವು ಹತ್ತಿ ಸಸ್ಯಗಳಿಗೆ ಉತ್ತಮ ಬೆಳವಣಿಗೆ, ಬೆಳೆ ಅಭಿವೃದ್ಧಿ ಮತ್ತು ಎಲ್ಲಾ ರೀತಿಯಲ್ಲಿ ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಪೋಷಕಾಂಶಗಳ ಅಗತ್ಯತೆ
ಬಿಟಿ ಹತ್ತಿ ಬೆಳೆ ಪ್ರತಿ ಎಕರೆಗೆ 80 ಕೆಜಿ ಸಾರಜನಕ [N ], 35 ಕೆಜಿ ರಂಜಕ [P ]ಫಾಸ್ಫರಸ್ ಮತ್ತು 35 ಕೆಜಿ ಪೊಟ್ಯಾಸಿಯಮ್[K] ರಷ್ಟು ಶಿಫಾರಸು ಮಾಡಿರುವ ಪರಿಮಾಣ.
ಬೆಳೆಗೆ ನೀಡಬೇಕಿರುವ ಗೊಬ್ಬರಗಳ ಪರಿಮಾಣ ಸಮಯದ ವಿವರಗಳು.
A |
ಮೂಲ ಗೊಬ್ಬರಗಳು |
|
1 |
ಸಿಂಗಲ್ ಸೂಪರ್ ಫಾಸ್ಫೇಟ್ [ಎಸ್‌ಎಸ್‌ಪಿ] - 100 ಕೆಜಿ |
ತಪಸ್ ಪುಷ್ಟಿ ಹೂಮಿಕ್ ಆಸಿಡ್ 1 ಲೀ ದ್ರಾವಣವನ್ನು 50 ಕೆಜಿ ಡಿಎಪಿಗೆ ಮಿಶ್ರಣ ಮಾಡಿಭೂಮಿಗೆ ಕೊಟ್ಟಾಗ ಹತ್ತಿ ಸಸಿಗಳ ಬೇರಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಹಾಗೂ ಸಸಿಗಳಿಗೆ ಭೂಮಿಯಲ್ಲಿನ ಇತರ ಪೋಷಕಾಂಶಗಳ ಹೀರುವ ಶಕ್ತಿಯನ್ನು ಹೆಚ್ಚಿಸುತ್ತದೆ. |
2 |
ಡಿ-ಅಮೋನಿಯಂ ಫಾಸ್ಫೇಟ್ [ಡಿಎಪಿ] - 50 ಕೆಜಿಗೆ |
|
3 |
ಮುರಿಯೇಟ್ ಆಫ್ ಪೊಟ್ಯಾಶ್ [ಎಂಒಪಿ] - 25 ಕೆ.ಜಿ. |
|
4 |
ಯೂರಿಯಾ 45 ಕೆ.ಜಿ. |
|
5 |
ಗಂಧಕ[ಸಲ್ಫರ್] ಗುಳಿಗೆ 10 ಕೆ.ಜಿ. |
|
6 |
ಮೆಗ್ನೀಸಿಯಮ್ ಸಲ್ಫೇಟ್ 25 kg |
|
7 |
ಸೂಕ್ಷ್ಮ ಪೋಷಕಾಂಶದ ಮಿಶ್ರಣ 10 kg |
|
B |
1 ನೇ ಮೇಲು ಗೊಬ್ಬರ [ಎರಡನೇ ಗೊಬ್ಬರ] ಬಿತ್ತನೆ ಮಾಡಿದ 40 - 50 ದಿನಗಳ ನಂತರ |
|
1 |
ಯೂರಿಯಾ 45 ಕೆ.ಜಿ. |
45 ಕೆಜಿ ಯೂರಿಯಾಕ್ಕೆ ತಪಸ್ ತೇಜ್ ಯೀಲ್ಡ್ ಬೂಸ್ಟರ್ ಅರ್ಧ ಲೀಟರ್ ದ್ರಾವಣವನ್ನು ಲೇಪಿತ ಮಾಡಿ ಹಾಕಿದರೆ ಇದು ಉತ್ತಮ ಹೂಬಿಡುವಿಕೆಗಾಗಿ ಹತ್ತಿ ಸಸ್ಯಗಳಿಗೆ ಸಹಾಯ ಮಾಡುತ್ತದೆ. |
2 |
ಮೆಗ್ನೀಸಿಯಮ್ ಸಲ್ಫೇಟ್ 25 ಕೆಜಿ |
|
3 |
ಕ್ಯಾಲ್ಸಿಯಂ ನೈಟ್ರೇಟ್ 15 ಕೆ.ಜಿ. |
|
4 |
||
5 |
ಮುರಿಯೇಟ್ ಆಫ್ ಪೊಟ್ಯಾಶ್ [ಎಂಒಪಿ] - 25 ಕೆ.ಜಿ. |
|
C |
2 ನೇ ಮೇಲು ಗೊಬ್ಬರ [ಮೂರನೇ ಗೊಬ್ಬರ] ಬಿತ್ತನೆ ಮಾಡಿದ 80- 90 ದಿನಗಳ ನಂತರ |
|
1 |
ಅಮೋನಿಯಂ ಸಲ್ಫೇಟ್ 100 ಕೆಜಿ |
ಅಮೋನಿಯಂ ಸಲ್ಫೇಟ್ 100 ಕೆಜಿಗೆ ತಪಸ್ ಪುಷ್ಟಿ ಆಲ್ ನ್ಯೂಟ್ರಿಯೆಂಟ್ ಮಿಕ್ಸ್ 1 ಲೀಟರ್ ಮಿಶ್ರಣ ಹಾಗೂ ಲೇಪನ ಮಾಡಿ ಹತ್ತಿ ಬೆಳೆ ಭೂಮಿಗೆ ಕೊಟ್ಟಾಗ ಹತ್ತಿ ನೂಲು ಅಥವಾ ನಾರಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ |
2 |
ಮುರಿಯೇಟ್ ಆಫ್ ಪೊಟ್ಯಾಶ್ [ಎಂಒಪಿ] - 25 ಕೆ.ಜಿ. |
|
3 |
ಪೊಟ್ಯಾಸಿಯಮ್ ನೈಟ್ರೇಟ್ 10 ಕೆಜಿ |
**********
K SANJEEVA REDDY,
LEAD Agronomist, BigHaat.
ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ 8050797979 ಗೆ ಕರೆ ಮಾಡಿ ಅಥವಾ 180030002434 ಗೆ ಮಿಸ್ಡ್ ಕಾಲ್ ನೀಡಿ. 8050797979 ಗೆ ವಾಟ್ಸಾಪ್ ಕೂಡ ಮಾಡಬಹುದು. ________________________________________________________
Disclaimer: The performance of the product (s) is subject to usage as per manufacturer guidelines. Read enclosed leaflet of the product(s) carefully before use. The use of this product(s)/ information is at the discretion of user.
**********
No
BT ಬಿಜನೇ ಮಾಡುವುದು ಎಗೆ ಎಂದು ತಿಳಿಸಿ ಕೊಡಿ
ಹತ್ತಿ ಬೀಜ
Leave a comment